Friday, June 27, 2025

ವಿದೇಶದಲ್ಲಿದ್ದುಕೊಂಡೇ ಎಂಟು ವರ್ಷ ಸರ್ಕಾರಿ ಸಂಬಳ ಪಡೆದ ಶಾಲಾ ಮುಖ್ಯ ಶಿಕ್ಷಕಿ..!

ಶಿಕ್ಷಕಿಯೊಬ್ಬಳು ಎಂಟು ವರ್ಷಗಳಿಂದ ವಿದೇಶದಲ್ಲಿದ್ದರೂ ಬಿಟ್ಟಿಯಾಗಿ ಸರ್ಕಾರಿ ಸಂಬಳ ಎಣಿಸಿದ ವಿಚಿತ್ರ ವರದಿ ಸುದ್ದಿಯಾಗಿದೆ. ಚಿಕಾಗೋದಲ್ಲಿ ಕುಳಿತುಕೊಂಡೆ ಬರೋಬ್ಬರಿ 8 ವರ್ಷದಿಂದ ಸಂಬಳವನ್ನು ಎಣಿಸಿಕೊಂಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗುಜರಾತ್​ನ ಬನಸ್ಕಾಂತಾ ಎಂಬ ಹಳ್ಳಿಯಲ್ಲಿ ಪಂಚ ಪ್ರಾಥಮಿಕ ಶಾಲೆಯಲ್ಲಿ ಹೆಡ್​ಮಿಸ್ ಆಗಿದ್ದ ಭಾವನಾ ಪಟೇಲ್ ಅನ್ನುವವರು ಕಳೆದ ಎಂಟು ವರ್ಷದಿಂದ ಚಿಕಾಗೋದಲ್ಲಿ ವಾಸವಿದ್ದಾರೆ. ಆದರೂ ಕೂಡ ರಾಜ್ಯ ಸರ್ಕಾರದಿಂದ ಅವರಿಗೆ ಈ ಎಂಟು ವರ್ಷದಿಂದ ತಿಂಗಳು ತಿಂಗಳು ತಪ್ಪದೇ ಸಂಬಳ ಹೋಗಿದೆ. ಇದರ ವಿರುದ್ಧ ಸದ್ಯ ಸ್ಥಳೀಯರು ಸಿಡಿದೆದ್ದಿದ್ದಾರೆ. ಗ್ರಾಮದ ಕೆಲವು ವಿದ್ಯಾರ್ಥಿಗಳು ಇದನ್ನು ಕಂಡುಹಿಡಿದು ಇದರ ಬಗ್ಗೆ ವಿಚಾರ ಮಾಡಿದಾಗ ಕಳೆದ 8 ವರ್ಷಗಳಿಂದ ಭಾವನಾ ಪಟೇಲ್ ಅನ್ನುವವರಿಗೆ ಸರ್ಕಾರಿ ಸಂಬಳ ಬಿಟ್ಟಿಯಾಗಿ ಹೋಗುತ್ತಿರುವುದು ತಿಳಿದು ಬಂದಿದೆ.

ಸ್ಥಳೀಯರು ಹೇಳುವ ಪ್ರಕಾರ ಭಾವನಾ ಪಟೇಲ್​ ದೀಪಾವಳಿಗೊಮ್ಮೆ ಮಾತ್ರ ಈ ಊರಿಗೆ ಬಂದು ಶಾಲೆಗೆ ಭೇಟಿಕೊಟ್ಟು ಹೋಗುತ್ತಾರೆ. ಆ ವೇಳೆ ಯಾವುದೇ ವಿದ್ಯಾರ್ಥಿಗಳು ಕೂಡ ಶಾಲೆಯಲ್ಲಿ ಇರುವುದಿಲ್ಲ, ಆ ಸಮಯದಲ್ಲಿ ಬಂದು ಹೋಗುವ ಇವರು ಮತ್ತೆ ಈ ಕಡೆ ಮುಖ ಮಾಡುವುದಿಲ್ಲ ಅವರಿಗೆ ಹೇಗೆ ಎಂಟು ವರ್ಷದಿಂದ ಸಂಬಳ ಹೋಗುತ್ತಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಬಂದ ಮಾಹಿತಿಯ ಪ್ರಕಾರ 2013ರಲ್ಲಿಯೇ ಭಾವನಾ ಪಟೇಲ್ ಚಿಕಾಗೋಗೆ ಹೋಗಿದ್ದಾರೆ. ಅಲ್ಲಿನ ಗ್ರೀನ್​ ಕಾರ್ಡ್​ ಕೂಡ ಹೊಂದಿದ್ದಾರೆ, ಆದ್ರೂ ಕೂಡ ಇಲ್ಲಿನ ಬಿಟ್ಟಿ ಸಂಬಳವನ್ನಂತು ತಿನ್ನುವುದು ಬಿಟ್ಟಿಲ್ಲ.

ಸದ್ಯ ಶಾಲೆಯ ಇನ್ ಚಾರ್ಜ್ ಪ್ರಿನ್ಸಿಪಾಲ್ ಆಗಿರುವಂತಹ ಪಾರುಲ್ ಮೆಹ್ತಾ ಈ ವಿಷಯವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಸದ್ಯದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Related Articles

Latest Articles