Sunday, November 3, 2024

ಏರ್‌ಪೋರ್ಟ್‌ನಲ್ಲಿ ಹಾವು-ಮುಂಗುಸಿ ಕಾಳಗ; ಮೂರು ಮುಂಗುಸಿಗಳನ್ನು ಎದುರಿಸಿದ ನಾಗರ ಹಾವು

ನಾಗರ ಹಾವು ಮತ್ತು ಮುಂಗುಸಿಯನ್ನು ಆ ಜನ್ಮದ ಶತ್ರುಗಳೆಂದೇ ಹೇಳಬಹುದು. ಈ ಉಭಯ ಜೀವಿಗಳು ಯಾವುದೇ ಕ್ಷಣದಲ್ಲೂ ಎದುರು ಬದುರಾದರೆ ಅಲ್ಲೊಂದು ಘನಘೋರ ಯುದ್ಧ ನಡೆಯುವುದಂತೂ ಪಕ್ಕ.

ಇವುಗಳ ನಡುವಿನ ಕಾಳಗವೇ ಬಲು ರೋಚಕ. ಈ ಪರಮ ಶತ್ರುಗಳ ನಡುವಿನ ರೋಚಕ ಕಾಳಗದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದೆ.

ಪಾಟ್ನಾ ವಿಮಾನ ನಿಲ್ದಾಣದ ರನ್‌ವೇಯಲ್ಲಿಯೇ ಮೂರು ಮುಂಗುಸಿಗಳು ಒಬ್ಬಂಟಿ ಹಾವಿನ ಜೊತೆಗೆ ಕಾಳಗಕ್ಕೆ ಇಳಿದಿವೆ. ಈ ವಿಡಿಯೋ ಇದೀಗ ನೋಡುಗರ ಗಮನ ಸೆಳೆಯುತ್ತಿದೆ.

NDTV ತನ್ನ ಅಧೀಕೃತ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, “ಪಾಟ್ನಾ ಏರ್‌ಪೋರ್ಟ್‌ ರನ್‌ವೇಯಲ್ಲಿ ಹಾವು Vs ಮೂರು ಮುಂಗುಸಿಗಳ ಫೈಟ್”‌ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

Related Articles

Latest Articles