ಈ ಬಾರಿಯೂ ದೇಶದ ಹಲವೆಡೆ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದು ರೈತರಿಗೆ ಖುಷಿ ಸುದ್ದಿಯಾಗಿದೆ. 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳದಿಂದ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಲಿದೆ. ಬಳಿಕ ಜೂನ್ ಮೊದಲ ವಾರ ಕರ್ನಾಟಕದಲ್ಲಿ ಮಾನ್ಸೂನ್ ಮಳೆ ಆರಂಭವಾಗಲಿದೆ.
ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ದೇಶದಲ್ಲಿ ಮಾನ್ಸೂನ್ ಮಳೆ ಸುರಿಯಲಿದೆ. ಸೆಪ್ಟೆಂಬರ್ ಬಳಿಕ ಹಿಂಗಾರು ಮಳೆ ಪ್ರವೇಶ ಪಡೆಯಲಿದೆ.
ಏಪ್ರಿಲ್, ಮೇ ತಿಂಗಳಲ್ಲಿ ದೇಶದ ಹಲವೆಡೆ ಬಿಸಿಲಿನ ವಾತಾವರಣ ಇದೆ. ಆದರೂ ಜೂನ್‌ನಿಂದ ಮುಂದಿನ 4 ತಿಂಗಳ ಕಾಲ ಈ ವರ್ಷ ಶೇಕಡಾ 105ರಷ್ಟು ಮಾನ್ಸೂನ್ ಮಳೆ ಆಗಲಿದೆ ಎಂದ ಭಾರತೀಯ ಹವಾಮಾನ ಇಲಾಖೆ ಹೇಳಿದೆ. ದೇಶಾದ್ಯಂತ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ.