ಬೆಂಗಳೂರು : ಹೆಚ್‌ಐವಿ ಸೋಂಕಿತ ಎಂದು ಬೇಧಭಾವ ತೋರಿ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ ಬೆಂಗಳೂರಿನ ಖಾಸಗಿ ಕಂಪನಿಯೊಂದರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ನ್ಯಾಯಾಲಯದ ಮೂಲಕ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಬಾಧಿತ ಉದ್ಯೋಗಿಯನ್ನು ಹೆಚ್‌ಐವಿ ಇದೆ ಎಂದು ಪ್ರತ್ಯೇಕ ಜಾಗದಲ್ಲಿ ಕಂಪನಿ ಕೂರಿಸುತ್ತಿತ್ತಂತೆ. ನಂತರ ಹಾಜರಾತಿ ಇಲ್ಲ ಎಂದು ಸಂಬಳ ನೀಡದೆ
ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ.