Monday, December 9, 2024

ಶಾಸಕ ಎಸ್ ಸುರೇಶ್ ಕುಮಾರ್ ನಕಲಿ ಫೇಸ್ ಬುಕ್ ಖಾತೆ: ಹಣಕ್ಕೆ ಬೇಡಿಕೆಯಿಟ್ಟ ಖದೀಮರು

ಈಗಾಗಲೇ ಹಲವು ಬಾರಿ ಶಾಸಕ ಎಸ್.ಸುರೇಶ್ ಕುಮಾರ್ ಅವರ ಫೇಸ್ ಬುಕ್ ಖಾತೆಯನ್ನು ನಕಲು ಮಾಡಲಾಗಿತ್ತು. ನಕಲಿ ಖಾತೆ ತೆರೆದು ಅವರ ಸ್ನೇಹಿತರ ಲೀಸ್ಟ್ ನಲ್ಲಿದ್ದಂತವರಿಗೆ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇದೀಗ ಮತ್ತೊಮ್ಮೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಅವರ ಫೇಸ್ ಬುಕ್ ನಕಲಿ ಖಾತೆ ತೆರೆಯಲಾಗಿದೆ.

ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂದು ಪೊಲೀಸರಿಗೆ ದೂರು ನೀಡಲಿದ್ದಾರೆ.

ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿರುವಂತ ಶಾಸಕ ಎಸ್ ಸುರೇಶ್ ಕುಮಾರ್, ಗೆಳೆಯರೊಬ್ಬರು ನನಗೆ ಇದೀಗ ಫೋನ್ ಮಾಡಿ ನನ್ನ ಹೆಸರಿನಲ್ಲಿ ಯಾರೋ ದುರುಳರು ನಕಲಿ FB ಅಕೌಂಟ್ ಮೂಲಕ ಎಲ್ಲರಿಗೂ ಹಣ ಕೇಳುತ್ತಿದ್ದಾರೆಂದು ನನ್ನ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಯಾರಿಂದಲೂ ಫೋನ್ ಪೇ ಅಥವಾ ಗೂಗಲ್ ಪೇ ಅಥವಾ ಇನ್ಯಾವುದಾರರ ಮೂಲಕ ಹಣವನ್ನು ಕೇಳುವ ಪರಿಸ್ಥಿತಿ ಬಂದಿಲ್ಲ. ಈ ನಕಲಿ ಅಕೌಂಟ್ ಗಾರರ ಆಟಕ್ಕೆ ಯಾರೂ ಬಲಿಯಾಗಬಾರದೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಆ ಅಕೌಂಟ್ ನಲ್ಲಿ ಕಾಣಿಸಿರುವಂತೆ ನನಗೂ ಉತ್ತರ ಪ್ರದೇಶಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಅಪ್ಪಟ ಕರ್ನಾಟಕದ, ಬೆಂಗಳೂರಿನ ಹೆಮ್ಮೆಯ ನಾಗರಿಕ. ಈ ಕುರಿತಂತೆ ಪೊಲೀಸ್ ಇಲಾಖೆಗೂ ಕ್ರಮ ಕೈಗೊಳ್ಳುವಂತೆ ಇಂದು ದೂರು ಸಲ್ಲಿಸುತ್ತಿರೋದಾಗಿ ತಿಳಿಸಿದ್ದಾರೆ.

Related Articles

Latest Articles