Monday, December 9, 2024

ಕಾಸರಗೋಡು: ಬಾಡಿಗೆ ಮನೆಯಲ್ಲಿ ಏಳು ಕೋಟಿ ರೂ. ನಕಲಿ ನೋಟು ಪತ್ತೆ

ಕಾಸರಗೋಡು: ಚಾಲ್ತಿಯಲ್ಲಿರದ ಎರಡು ಸಾವಿರ ಮುಖ ಬೆಲೆಯ ನಕಲಿ ಕಂತೆ ಕಂತೆ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ‌. ಅಂಬಲತ್ತರದ ಪರಪಳ್ಳಿ ಗುರುಪುರಂನಲ್ಲಿ ಬಾಡಿಗೆ ಮನೆಯಲ್ಲಿದ್ದ ಬರೋಬ್ಬರಿ 7.25 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರುಕಟ್ಟೆಯಿಂದ ಹಿಂಪಡೆದಿದ್ದ 2000 ರೂಪಾಯಿಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಸುಳಿವಿನ ಮೇರೆಗೆ ಅಂಬಲತ್ತರ ಪೊಲೀಸರು ಬುಧವಾರ ಸಂಜೆ ನಡೆಸಿದ ದಾಳಿ ವೇಳೆ ನೋಟುಗಳು ಪತ್ತೆಯಾಗಿವೆ.

ಪಾಣತ್ತೂರು ಪಾಣತ್ತಡಿಯ ಅಬ್ದುಲ್ ರಝಾಕ್ ಎಂಬುವರು ಈ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಪೊಲೀಸರು ಆತನನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಸ್ವಿಚ್ ಆಫ್ ಆಗಿತ್ತು. ಎರಡು ದಿನಗಳಿಂದ ಆತ ಮನೆಗೆ ಬಂದಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ನಂತರ ಪೊಲೀಸರು ಮನೆ ತೆರೆದು ಶೋಧ ನಡೆಸಿದಾಗ ನೋಟುಗಳು ಗೋಣಿಚೀಲದಲ್ಲಿದ್ದುದು ಪತ್ತೆಯಾಗಿದ್ದು ಆರೋಪಿಗೆ ಬಲೆ ಬೀಸಿದ್ದಾರೆ‌.

Related Articles

Latest Articles