ಮರಕ್ಕೆ ಕಾರು ಗುದ್ದಿ ಪೊಲೀಸ್ ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆಯ ನ್ಯಾಮತಿಯ ದಾನಿಹಳ್ಳಿ ಬಳಿ ನಡೆದಿದೆ. ಸಿದ್ದೇಶ್ (34) ಮೃತ ದುರ್ದೈವಿ.
ದಾವಣಗೆರೆ DAR ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದೇಶ್ ಮಂಗಳೂರಿಗೆ ಹೊರಟಿದ್ದರು. ತಮ್ಮ ಭಾವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಕರೆದುಕೊಂಡು ಬರಲು ಸಿದ್ದೇಶ್ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿದ್ದ ಕಾರು ಮರಕ್ಕೆ ಗುದ್ದಿ ಅಪಘಾತ ಸಂಭವಿಸಿ ಅಸುನೀಗಿದ್ದಾರೆ.
ದಾವಣಗೆರೆ DAR ಸಿದ್ದೇಶ್ ಸಾವಿಗೆ ಪೊಲೀಸ್ ಇಲಾಖೆ ಮತ್ತು ಎಸ್ಪಿ ಉಮಾ ಪ್ರಶಾಂತ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.