Tuesday, July 23, 2024

ಬಾಲ್ಯವಿವಾಹ: ಬಲವಂತವಾಗಿ ದೈಹಿಕ ಸಂಪರ್ಕ – ಎಫ್‌ಐಆರ್ ದಾಖಲು

ಬೆಂಗಳೂರು: ಬಾಲ್ಯ ವಿವಾಹ ನಡೆದ ಘಟನೆ ಬೆಳಕಿಗೆ ಬಂದಿದ್ದು, ಆರ್.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಷ್ಟವಿಲ್ಲದಿದ್ದರೂ 16 ವರ್ಷದ ಬಾಲಕಿಗೆ ತಾಯಿ ಮದುವೆ ಮಾಡಿಸಿದ್ದಾರೆ. ಆರ್.ಆರ್. ನಗರದ ದೇವಾಲಯದಲ್ಲಿ 27 ವರ್ಷದ ಯುವಕನೊಂದಿಗೆ ಅಪ್ರಾಪ್ತೆಗೆ ಮದುವೆ ಮಾಡಿಸಲಾಗಿದೆ.

ಮದುವೆಯ ನಂತರ ಬಾಲಕಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಲವಂತದ ಮದುವೆ ಮಾಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಗೆ ಬಾಲಕಿ ಹೇಳಿಕೆ ನೀಡಿದ್ದು, ಆರ್.ಆರ್. ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Related Articles

Latest Articles