Friday, June 13, 2025

ಪುರಷನ ಜತೆ ರಾತ್ರಿ ಲಾಡ್ಜ್​ಗೆ ಬಂದಿದ್ದ ಮಹಿಳೆ ಬೆಳಗ್ಗೆ ಶವವಾಗಿ ಪತ್ತೆ..! ಸಾವಿನ ಸುತ್ತ ಅನುಮಾನ

ಚಿಕ್ಕಬಳ್ಳಾಪುರ; ನಗರದ ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಲಾಡ್ಜ್​​ನಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ. ಸೆಪ್ಟೆಂಬರ್ 29 ರಾತ್ರಿ ಬಂದ ಜೋಡಿಯೊಂದು, ರೂಮ್ ಮಾಡಿಕೊಂಡು ರಾತ್ರಿಯಿಡಿ ತಂಗಿದ್ದಾರೆ. ಆದ್ರೆ ಬೆಳಿಗ್ಗೆ ಲಾಡ್ಜ್ ನಿಂದ ಪುರುಷ ಮಾತ್ರ ಆಚೆ ಹೋಗಿದ್ದು, ಮಹಿಳೆ ಆಚೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ, ಹೋಗಿ ನೋಡಿದ್ದಾರೆ. ಈ ವೇಳೆ ರೂಮಿನಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ.

ಇನ್ನು ಮಹಿಳೆಯ ಜೊತೆ ಬಂದಿದ್ದವ ಚಿಕ್ಕಬಳ್ಳಾಪುರ ತಾಲೂಕು ಮೂಲದ ನರಸಿಂಹಮೂರ್ತಿ ಎನ್ನಲಾಗಿದೆ. ಲಾಡ್ಜ್ ಸಿಬ್ಬಂದಿ ರೂಮ್ ಬುಕ್ ಮಾಡುವಾಗ ಯಾವುದೆ ದಾಖಲೆ ಪಡೆದಿಲ್ಲ, ಹೆಸರು ವಿಳಾಸ ಪಡೆದುಕೊಂಡಿಲ್ಲ, ಇದರಿಂದ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಜೊತೆ ಬಂದಿದ್ದ ವ್ಯಕ್ತಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಪಷ್ಟತೆಯಿಲ್ಲ. ಇದರಿಂದ ಪೊಲೀಸರು ಮೊಬೈಲ್ ತಂತ್ರಜ್ಞಾನ ಬಳಸಿ ಆರೋಪಿಯ ಪತ್ತೆಯಾರ್ಯ ನಡೆಸಿದ್ದಾರೆ. ಆದ್ರೆ ಮಹಿಳೆಯ ಕೊಲೆ ಮಾಡಲಾಗಿದಿಯಾ ಇಲ್ಲಾ ಏಕಾಂತದಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿದಿಯಾ ತನಿಖೆಯಿಂದ ಗೊತ್ತಾಗಬೇಕಿದೆ.

Related Articles

Latest Articles