Monday, October 14, 2024

ಗಂಡನನ್ನು ಬಿಟ್ಟು ಬಾರದೆ ಇದ್ದರೆ ಖಾಸಗಿ ವಿಡಿಯೋ ವೈರಲ್, ಹಿಂದೂ‌-ಮುಸ್ಲಿಂ ಗಲಾಟೆ ಮಾಡುವುದಾಗಿ ಶಿಕ್ಷಕಿಗೆ ಬೆದರಿಕೆ

ಚಾಮರಾಜನಗರ: ಶಾಲಾ ಶಿಕ್ಷಕಿಯ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ್ದು ಮಾತ್ರವಲ್ಲದೆ, 10 ಲಕ್ಷ ರೂಪಾಯಿ ಹಣ ನೀಡದೆ ಇದ್ದರೆ, ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್​ ಮೇಲ್ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಬ್ದುಲ್ ಅಸೀಮ್ ಹಾಗೂ ಮಯೂರ್ ಎನ್ನುವವ ಶಿಕ್ಷಕಿ ಬಳಿ ಹಣಕ್ಕೆ ಡಿಮ್ಯಾಂಡ್​ ಇಟ್ಟಿದ್ದಲ್ಲದೇ ಗಂಡನನ್ನು ಬಿಟ್ಟು ಬರುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಪತಿಯನ್ನು ಬಿಟ್ಟು ಬರದಿದ್ದರೆ ಹಿಂದೂ-ಮುಸ್ಲಿಂ ಗಲಾಟೆ ಮಾಡಿಸುವುದಾಗಿ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದ ಶಿಕ್ಷಕಿಗೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಬ್ದುಲ್ ಅಸೀಮ್ ಹಾಗೂ ಮಯೂರ್ ಎಂಬುವವರು ಶಿಕ್ಷಕಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಪತಿ ಹಾಗೂ ಕುಟುಂಬಸ್ಥರಿಗೆ ಕಳುಹಿಸಿದ್ದಾರೆ. ಅಬ್ಧುಲ್ ಅಸೀಮ್ ಎನ್ನುವಾತ ನೊಂದ ಸಂತ್ರಸ್ಥೆ ಜೊತೆ ಕಳೆದ 7 ವರ್ಷಗಳಿಂದ ಸ್ನೇಹಿತನಾಗಿದ್ದ. ಆದ್ರೆ, ಶಿಕ್ಷಕಿ ಕಳೆದ 2 ವರ್ಷದ ಹಿಂದೆ ಬೇರೊಬ್ಬನ್ನೊಂದಿಗೆ ವಿವಾಹವಾಗಿದ್ದರು. ವಿವಾಹದ ಬಳಿಕ ಪತಿಯನ್ನ ಬಿಟ್ಟು ನನ್ನ ಜೊತೆ ಬಾ ಎಂದು ದುಂಬಾಲು ಬಿದ್ದಿದ್ದ. ಪತಿಯನ್ನ ಬಿಟ್ಟು ಬರದೆ ಇದ್ದರೆ ನಮ್ಮಿಬ್ಬರ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇನ್ನು ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಬಾರದು ಅಂದ್ರೆ 10 ಲಕ್ಷ ರೂ. ಹಣ ನೀಡಬೇಕೆಂದು ಡಿಮ್ಯಾಂಡ್ ಇಟ್ಟಿದ್ದಾನೆ. ಇದರಿಂದ ನೊಂದ ಸಂತ್ರಸ್ಥೆ ಶಿಕ್ಷಕಿ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಇತ್ತ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Related Articles

Latest Articles