ಸಿನಿಮೀಯ ಸ್ಟೈಲ್ನಲ್ಲಿ 10ನೇ ತರಗತಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ. ಗೋಪನಹಳ್ಳಿ ಗ್ರಾಮದ ಬಾಲಕ, ಎಂದಿನಂತೆ ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿ ಶಾಲೆಗೆ ಹೋಗುತ್ತಿದ್ದ. ಇದೇ ವೇಳೆ ಕಾರಿನಲ್ಲಿ ಬಂದ ನಾಲ್ವರು, ಶಾಲೆಗೆ ಬಿಡುತ್ತೇವೆ ಎಂದು ಬಾಲಕನಿಗೆ ಕುಡಿಯಲು ನೀರು ಕೊಟ್ಟಿದ್ದಾರೆ.
ನೀರು ಕುಡಿದ ಬಾಲಕ ತಕ್ಷಣ ಮೂರ್ಛೆ ಹೋಗಿದ್ದಾನೆ. ಬಳಿಕ ದಾವಣಗೆರೆ ಹತ್ತಿರ ಬಾಲಕ ಕಣ್ಣು ಬಿಟ್ಟಾಗ ಟ್ರಕ್ನಲ್ಲಿದ್ದಿದ್ದು ಗೊತ್ತಾಗಿದೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಬಾಲಕ, ಖಾಸಗಿ ಬಸ್ನಲ್ಲಿ ಬಂದು ದಾವಣಗೆರೆಯ ಬಡಾವಣೆ ಸ್ಟೇಷನ್ಗೆ ಮಾಹಿತಿ ನೀಡಿದ್ದಾನೆ.
ಬಳಿಕ ಪಾಲಕರನ್ನು ದಾವಣಗೆರೆಗೆ ಕರೆಸಿಕೊಂಡ ಪೊಲೀಸರು, ಬಾಲಕನನ್ನ ಒಪ್ಪಿಸಿದ್ದಾರೆ. ಈ ಕುರಿತು ಚಳ್ಳಕೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ