ಬೇಸಿಗೆ ಬರುತ್ತಲೇ ಹಾವುಗಳು ನೆರಳಿನ ಆಶ್ರಯ ಪಡೆದುಕೊಳ್ಳುತ್ತೆ. ಕಾರು, ಬೈಕ್ ಹೀಗೆ ನಿಲ್ಲಿಸಿದ್ದ ವಾಹನದೊಳಗೆ ಸೇರಿಕೊಳ್ಳುತ್ತೆ. ಇಲ್ಲೂ ಸಹ ಬೈಕ್ ರೈಡ್‌ಗೆ ಹೋಗುವ ಮೊದಲು ತನ್ನ ಹೆಲ್ಮೆಟ್ ತೆಗೆದುಕೊಂಡು ಹಾಕಬೇಕು ಅನ್ನುವಷ್ಟರಲ್ಲಿ ನಾಗರಹಾವು ಅಡಗಿಕೊಂಡಿರುವುದು ಕಂಡುಬಂದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
120k ಅನುಯಾಯಿಗಳನ್ನು ಹೊಂದಿರುವ Instagram ಬಳಕೆದಾರರಾದ ದೇವ್ ಶ್ರೇಷ್ಠಾ ಹಾವು ಇರುವ ಕಿರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.