Friday, March 21, 2025

ಕೆನರಾ ಬ್ಯಾಂಕ್​​ನಲ್ಲಿ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬ್ಯಾಂಕ್​​ನ ಜಾಬ್​ಗಾಗಿ ಕಾದು ಕುಳಿತಿರುವ ಹಾಗೂ ಬ್ಯಾಂಕ್​​ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್​. ಬರೋಬ್ಬರಿ ಮೂರು ಸಾವಿರ ಉದ್ಯೋಗಳನ್ನು ಕಾಲ್​ಫಾರ್ಮ್ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಉದ್ಯೋಗಿಯಾಗಿ ಹೊಸ ಜೀವನ ರೂಪಿಸಿಕೊಳ್ಳಬಹುದು.

ಬೆಂಗಳೂರಿನಲ್ಲಿನ ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ವುಮೆನ್​ ರಿಸೋರ್ಸ್ ವಿಭಾಗ ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಿದೆ. ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ದೇಶವ್ಯಾಪಿ ಇರುವ ಎಲ್ಲ ಬ್ರ್ಯಾಂಚ್​ಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಈ ಸಂಬಂಧ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ, ಅರ್ಹರು ಇದನ್ನು ಸದುಪಯೋಗ ಮಾಡಿಕೊಳ್ಳಬಹುದು. ಕರ್ನಾಟಕದಲ್ಲಿ ಒಟ್ಟು 600 ಉದ್ಯೋಗಗಳಿದ್ದು ಅದರಲ್ಲಿ ಬೆಂಗಳೂರು ಅರ್ಬನ್​ನಲ್ಲಿ 92 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆ ಹೆಸರು- ಕೆನರಾ ಬ್ಯಾಂಕ್
ಪೋಸ್ಟ್ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆಗಳು- 3,000
ವೆಬ್​ಸೈಟ್- @canarabank.com

ವಯೋಮಿತಿ: 20 ರಿಂದ 28 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು
ವಯೋಮಿತಿ ಸಡಿಲಿಕೆ:
ಎಸ್​ಎಸಿ, ಎಸ್​ಟಿಗೆ 5 ವರ್ಷಗಳು ಸಡಿಲಿಕೆ
ಒಬಿಸಿ, ಜನರಲ್ 3 ವರ್ಷಗಳು ಇರುತ್ತದೆ
ವಿಶೇಷ ಚೇತನಿಗೆ 10 ವರ್ಷಗಳು ಸಡಿಲಿಕೆ

ವಿದ್ಯಾರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?
ಸೆಕೆಂಡ್ ಪಿಯುಸಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧ ಪಡಿಸಲಾಗುತ್ತದೆ
ಟೆಸ್ಟ್ ನಡೆಸಲಾಗುತ್ತದೆ

ದಾಖಲೆ ಪರಿಶೀಲನೆ
ಸಂಸ್ಥೆಯಿಂದ ಆಯ್ಕೆ ಮಾಡಲಾದ ಬ್ರ್ಯಾಂಚ್​ಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು ಇರುತ್ತದೆ..?
ಎಸ್​​ಸಿ, ಎಸ್​​ಟಿ, ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಇರಲ್ಲ
ಜನರಲ್, ಒಬಿಸಿ ಸೇರಿ ಎಲ್ಲರಿಗೂ- 500 ರೂಪಾಯಿಗಳು

ಈ ಹುದ್ದೆಗೆ ಸಂಬಂಧಿಸಿದ ಪ್ರಮುಖ ತಾರೀಖು:
ನೋಟಿಫಿಕೇಶನ್ ರಿಲೀಸ್- ಸೆಪ್ಟೆಂಬರ್ 18
ಆನ್​ಲೈನ್ ಅರ್ಜಿ ಆರಂಭ- ಸೆಪ್ಟೆಂಬರ್ 21
ಅರ್ಜಿ ಹಾಕಲು ಕೊನೆ ದಿನ- ಅಕ್ಟೋಬರ್ 04

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಗಮನಿಸಿ- https://canarabank.com/UploadedFiles/Pdf/APPRENTICESHIP_ADVERTISEMENT_COMBINED.pdf

Related Articles

Latest Articles