ವಿಶ್ವ ಉದ್ಯಮಿ ಜೆಫ್ ಬೆಜೋಸ್ ಒಡೆತನದ ಬ್ಲೂ ಒರಿಜಿನ್, ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಉತ್ತೇಜಿಸುವತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಏಪ್ರಿಲ್ 14 ರ ಸೋಮವಾರ ಮಹಿಳಾ ಸೆಲೆಬ್ರಿಟಿಗಳೊಂದಿಗೆ 11 ನಿಮಿಷಗಳ ಬಾಹ್ಯಾಕಾಶ ನಡಿಗೆಯನ್ನು ಯಶಸ್ವಿಯಾಗಿ ಪೂರೈಸಿ ದಾಖಲೆ ಬರೆದಿದೆ.
ಬೆಜೋಸ್ ಅವರ ಭಾವಿ ಪತ್ನಿ ಲಾರೆನ್ ಸ್ಯಾಂಚೆಜ್, ಪ್ರಸಿದ್ಧ ಅಮೆರಿಕನ್ ಗಾಯಕಿ ಕೇಟಿ ಪೆರಿ, ಪತ್ರಕರ್ತೆ ಗೇಲ್ ಕಿಂಗ್, ಚಲನಚಿತ್ರ ನಿರ್ಮಾಪಕಿ ಕೆರಿಯನ್ ಫಿನ್, ಅಮಂಡಾ ನುಯೆನ್ ಮತ್ತು ಮಾಜಿ ನಾಸಾ ಇಂಜಿನಿಯರ್ ಆಯೇಷಾ ಬೋವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ಕಾರ್ಯಾಚರಣೆಯನ್ನು ಬ್ಲೂ ಆರಿಜಿನ್‌ನ ನ್ಯೂ ಲೆಪರ್ಡ್ ಬಾಹ್ಯಾಕಾಶ ನೌಕೆ NS-31 ನಿರ್ವಹಿಸಿತು. ಇದು ಏಪ್ರಿಲ್ 14ರಂದು ಪಶ್ಚಿಮ ಟೆಕ್ಸಾಸ್‌ನಿಂದ ಉಡಾವಣೆಯಾಯಿತು.
ಬಳಿಕ ಈ ಬಾಹ್ಯಾಕಾಶ ನೌಕೆ 107 ಕಿಲೋಮೀಟರ್ ಎತ್ತರವನ್ನು ತಲುಪಿತು. ಇದು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಬಾಹ್ಯಾಕಾಶ ಗಡಿಯಾದ ಕರ್ಮನ್ ರೇಖೆಯನ್ನು ಸಹ ದಾಟಿತು. ಅಲ್ಲಿ ಮಹಿಳೆಯರು ಬಾಹ್ಯಾಕಾಶದ ತೂಕವಿಲ್ಲದಿರುವಿಕೆಯ ಅನುಭವವನ್ನು ಆನಂದಿಸಿದರು. ಈ ಒಂದು ಕಾರ್ಯಾಚರಣೆಯು ಒಟ್ಟು 11 ನಿಮಿಷಗಳ ಕಾಲ ನಡೆಯಿತು. ನಂತರ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಿತು. ಇದು ಬ್ಲೂ ಒರಿಜಿನ್‌ನ 11ನೇ ಮಾನವಸಹಿತ ಬಾಹ್ಯಾಕಾಶ ಯಾನವಾಗಿದೆ.