ಬಾಲಿವುಡ್ ನಟಿ ರವೀನಾ ಟಂಡನ್ ಅವರು ವಯೋವೃದ್ಧ ಮಹಿಳೆ ಸೇರಿದಂತೆ ಇತರ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಆದರೆ ಇದೀಗ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದೆ. ಅದರಲ್ಲಿ ನಟಿಯೇ ಅಲ್ಲಿ ನೆರೆದಿದ್ದ ಜನರಿಗೆ ಹೊಡಿಬೇಡಿ ಪ್ಲೀಸ್ ಅಂದು ಅಂಗಲಾಚುತ್ತಿರುವುದು ಕಂಡುಬಂದಿದೆ.
ರವೀನಾ ಟಂಡನ್ ಇದ್ದ ಕಾರು ಮೂವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಾಲಕ ಹೊರಬಂದು ಮಹಿಳೆಯನ್ನು ಗದರಿದ್ದಾನೆ. ಅಲ್ಲದೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಅಪಘಾತದ ಬಳಿಕ ಕಾರು ಚಾಲಕನ ಮೇಲೆ ಸ್ಥಳೀಯರು ಹಲ್ಲೆಗೆ ಮುಂದಾಗಿದ್ದು ಈ ವೇಳೆ ನಟಿ ಕಾರಿನಿಂದ ಇಳಿದು ಚಾಲಕನನ್ನು ಹೊಡೆಯಬೇಡಿ ಪ್ಲೀಸ್ ಎಂದು ಮನವಿ ಮಾಡಿದ್ದರು. ಈ ವೇಳೆ ಮುಸ್ಲಿಂ ಮಹಿಳೆಯರು ನಟಿ ಮೇಲೆ ಹಲ್ಲೆಗೆ ಯತ್ನಿಸಿದ್ದು ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಲಿವುಡ್ ನಟಿ ರವೀನಾ ಟಂಡನ್ ಅವರು ವಯೋವೃದ್ಧ ಮಹಿಳೆ ಸೇರಿದಂತೆ ಇತರ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಆದರೆ ಇದೀಗ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು ಅದರಲ್ಲಿ ನಟಿಯೇ ಅಲ್ಲಿ ನೆರೆದಿದ್ದ ಜನರಿಗೆ ಹೊಡಿಬೇಡಿ ಪ್ಲೀಸ್ ಅಂದು ಅಂಗಲಾಚುತ್ತಿರುವುದು ಕಂಡುಬಂದಿದೆ
ವೀಡಿಯೊದಲ್ಲಿರುವ ವ್ಯಕ್ತಿ ನಂತರ ತಾನು ಸಂತ್ರಸ್ತಳ ಮಗ ಎಂದು ಹೇಳಿಕೊಳ್ಳುತ್ತಾನೆ. ನನ್ನ ಹೆಸರು ಮೊಹಮ್ಮದ್. ರವೀನಾ ಟಂಡನ್ ಅವರ ಮನೆ ಬಳಿ ಅವರ ತಾಯಿ, ಸಹೋದರಿ ಮತ್ತು ಸೊಸೆ ಹೋಗುತ್ತಿದ್ದಾಗ, ಚಾಲಕನು ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾನೆ. ಅಷ್ಟೇ ಅಲ್ಲ, ಆ ವ್ಯಕ್ತಿ ತನ್ನ ಮೇಲೆ ಕಾರು ಕಳ್ಳತನದ ಆರೋಪವನ್ನೂ ಮಾಡಿದ್ದ. ಆ ನಂತರ ರವೀನಾ ಟಂಡನ್ ಹೊರಬಂದರು. ಆಕೆ ಮದ್ಯದ ಅಮಲಿನಲ್ಲಿದ್ದಳು. ಅವರು ನನ್ನ ತಾಯಿಗೆ ಹೊಡೆದರು. ಅವರ ತಲೆ ಮುರಿದುಹೋಯಿತು. ಖಾರ್ ಪೊಲೀಸ್ ಠಾಣೆಯಲ್ಲಿ 4 ಗಂಟೆ ನಿಂತಿದ್ದೇವೆ. ಯಾರೂ ನಮ್ಮ ದೂರನ್ನು ತೆಗೆದುಕೊಳ್ಳುತ್ತಿಲ್ಲ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾನೆ.