ಇನ್‌ಸ್ಟಾಗ್ರಾಂನಲ್ಲಿ ರೀಲ್ ನೋಡಿ ಅಶ್ಲೀಲ ಸಂದೇಶ ಕಳುಹಿಸಿದ ಯುವಕನಿಗೆ ಬೆದರಿಸಿ ಲಕ್ಷಾಂತರ ಹಣ ಪೀಕಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಲಪ್ಪುಳದ ಜಸ್ಲಿ, ಆಲುವಾದಿಂದ ಅಭಿಜಿತ್ ಮತ್ತು ನಿಲಂಬೂರಿನ ಸಲ್ಮಾನ್ ಬಂಧಿತರು.
ಘಟನೆ ವಿವರ:
ಅಲಪ್ಪುಳದ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಚಲನಚಿತ್ರದ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡ ಮುವಾಟುಪುಳದ ಯುವಕನೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಈ ಕುರಿತಾಗಿ ಮಹಿಳೆ ಏಲೂರು ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಇದೇ ವೇಳೆ ಯುವತಿ ಮತ್ತು ಆಕೆಯ ತಂಡ ಇದನ್ನೆ ಬಂಡವಾಳ ಮಾಡಿಕೊಂಡಿದ್ದಾರೆ. ಯುಬಕನ ಕುಟುಂಬಕ್ಕೆ ಬೆದರಿಕೆ ಹಾಕಿದ್ದು, ಪ್ರಕರಣ ಇತ್ಯರ್ಥಪಡಿಸಲು 20 ಲಕ್ಷ ರೂ. ಕೊಡಲು ಯುವಕನಿಗೆ ಬೇಡಿಕೆ ಇಟ್ಟಿದ್ದಾರೆ.
ಇದಾದ ಬಳಿಕ ಕುಟುಂಬದವರೊಂದಿಗೆ ಚರ್ಚೆ ನಡೆಸಿ 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನಂತರ ಆ ಗ್ಯಾಂಗ್ ನ ಖಾತೆಗೆ ಎರಡು ಲಕ್ಷ ರೂ ಪಾವತಿಸಿದ್ದಾರೆ. ಈ ಬೆದರಿಕೆಯಿಂದ ಬೇಸತ್ತ ಯುವಕ ಪೊಲೀಸರ ಮೊರೆ ಹೋಗಿದ್ದಾನೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಯುವತಿ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.