ಏಷ್ಯನ್ ಗೇಮ್ಸ್’ನಲ್ಲಿ ಪದಕ ಗೆದ್ದ ಭಾರತದ ಕಠಿಣ ಪರಿಶ್ರಮವನ್ನ ಗುರುತಿಸಲು ಮತ್ತು ಮುಂದೆ ಸಾಗಲು ಪ್ರೋತ್ಸಾಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರಿ ಬಹುಮಾನದ ಮೊತ್ತವನ್ನು ಘೋಷಿಸಿದ್ದಾರೆ. ಅಕ್ಟೋಬರ್ 17 ರ ಮಂಗಳವಾರ ಭಾರತದ ಸಶಸ್ತ್ರ ಪಡೆಗಳ ಏಷ್ಯನ್ ಗೇಮ್ಸ್ ಪದಕ ವಿಜೇತರೊಂದಿಗೆ ಸಂವಹನ ನಡೆಸುವಾಗ ಗೌರವಾನ್ವಿತ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಈ ಘೋಷಣೆ ಮಾಡಿದರು.
ರಕ್ಷಣಾ ಸಚಿವಾಲಯವು ಚಿನ್ನದ ಪದಕ ವಿಜೇತರಿಗೆ 25 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 15 ಲಕ್ಷ ರೂ., ಮತ್ತು ಕಂಚಿನ ಪದಕ ಗೆದ್ದ ಕ್ರೀಡಾಪಟುಗಳಿಗೆ 10 ಲಕ್ಷ ರೂ.ಗಳ ಬಹುಮಾನ ನೀಡಿ ಗೌರವಿಸಲಿದೆ.
“ಈ ವರ್ಷದ ಏಷ್ಯನ್ ಕ್ರೀಡಾಕೂಟದಲ್ಲಿ ನಾವು ಒಟ್ಟು 107 ಪದಕಗಳನ್ನು ಗೆದ್ದಿದ್ದೇವೆ. ಕಳೆದ ಬಾರಿ 2018ರ ಏಷ್ಯನ್ ಗೇಮ್ಸ್ನಲ್ಲಿ ನಾವು 70 ಪದಕಗಳನ್ನು ಗೆದ್ದಿದ್ದೆವು. ಬೆಳವಣಿಗೆಯ ದೃಷ್ಟಿಯಿಂದ ನಾವು 70 ಪದಕಗಳಿಂದ 107 ಪದಕಗಳಿಗೆ ಈ ಪ್ರಯಾಣವನ್ನು ನೋಡಿದರೆ, ನಾವು ಸುಮಾರು 50% ಹೆಚ್ಚಳವನ್ನ ನೋಡಿದ್ದೇವೆ. ಭಾರತವು ಚಂದ್ರನನ್ನು ಸಹ ತಲುಪಿದೆ. ವಿಶ್ವದ ಅತಿದೊಡ್ಡ ಸಂಸ್ಥೆಗಳು ಭಾರತದ ಅಭಿವೃದ್ಧಿಯನ್ನು ಒಪ್ಪಿಕೊಳ್ಳುತ್ತಿವೆ. ಅದು ವಿಶ್ವ ಬ್ಯಾಂಕ್ ಆಗಿರಲಿ ಅಥವಾ ಐಎಂಎಫ್ ಆಗಿರಲಿ, ಭಾರತದ ಅಭಿವೃದ್ಧಿಯ ಪ್ರಯಾಣವನ್ನು ಎಲ್ಲೆಡೆ ಚರ್ಚಿಸಲಾಗುತ್ತಿದೆ” ಎಂದು ಸಿಂಗ್ ಸಂವಾದದ ಸಮಯದಲ್ಲಿ ಹೇಳಿದರು.