ನಾನು ನಂದಿನಿ ಕಂಚು ತಂದಿನಿ ಎನ್ನುತ್ತ ಏಷ್ಯನ್ ಕ್ರೀಡಾಕೂಟದಲ್ಲಿ ಸಿರಗುಪ್ಪ ಮೂಲದ ಯುವತಿ ಭರ್ಜರಿ ಸಾಧನೆ ಮಾಡಿದ್ದಾರೆ.
ಬಟ್ಟೆ ಒಗೆಯುವ ಕಾಯಕದ ಅಗಸರ ಸಮುದಾಯದ ಯುವತಿ ನಂದಿನಿಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.
ಮೂಲತಃ ಸಿರಗುಪ್ಪ ತಾಲೂಕಿನ ಶ್ರೀರಾಂಪುರ ಕ್ಯಾಂಪ್‌ನಲ್ಲಿ ನಂದಿನಿ ವಾಸವಾಗಿದ್ರು. ನಂದಿನಿ ಮಗುವಾಗಿದ್ದಾಗಲೇ ತಂದೆ ಯಲ್ಲಪ್ಪ ಜೀವನ ನಿರ್ವಹಣೆಗಾಗಿ ಹೈದರಾಬಾದ್ ಸಿಕಿದ್ರಾಬಾದ್ ಸೇರಿದ್ದರು.
ಬಡತನ ಮೆಟ್ಟಿನಿಂತು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ಹೆಪ್ದಥ್ಲಾನ್ ನಲ್ಲಿ ಕಂಚು ಪಡೆಯೋ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಈಗಲೂ ಕುಟುಂಬ ವಂಶ ಪಾರಂಪರ್ಯವಾಗಿ ಬಂದಿರೋ ಬಟ್ಟೆಗಳನ್ನು ಒಗೆಯೋ ಮತ್ತು ಇಸ್ತ್ರಿ ಮಾಡೋ ಕಾಯಕ ಮಾಡ್ತಿದೆ. ಬಡತನದಲ್ಲಿಯೂ ಮಗಳಿಗೆ ಒಳ್ಳೆಯ ತರಬೇತಿ ನೀಡಿಸೋ ಮೂಲಕ ಮಗಳಿಗೆ ತಂದೆ ಯಲ್ಲಪ್ಪ ಬೆನ್ನುಲುಬಾಗಿದ್ದಾರೆ.
ಪ್ರಸ್ತುತ ನಂದಿನಿ ಅವರು ಸಂಗಾರೆಡ್ಡಿಯಲ್ಲಿರುವ ತೆಲಂಗಾಣ ಸಮಾಜ ಕಲ್ಯಾಣ ವಸತಿ ಪದವಿ ಕಾಲೇಜಿನಲ್ಲಿ ಬಿಬಿಎ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.