ಮದುವೆ ಆದ ಮೂರೇ ದಿನದಲ್ಲಿ ಯುವತಿ ಇನ್ನೊಬ್ಬನ ಜೊತೆ ಓಡಿ ಹೋದ ಘಟನೆ ನಡೆದಿದೆ. ಎಸ್ಕೇಪ್ ಆದ ಯುವತಿಯ, ಯುವಕರ ಜೊತೆಗಿನ ಚೆಲ್ಲಾಟ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆ ಎರಡು ಬಾರಿ ಮದುವೆಯಾಗಿತ್ತು ಈ ಜೋಡಿ. ಆದರೆ ಮದುವೆಯಾದ ಬಳಿಕ ಯುವತಿಯನ್ನು ಪೋಷಕರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡುವುದಾಗಿ ನಂಬಿಸಿ ಕರೆದೊಯ್ದಿದ್ದರು. ಆದರೆ ನಾಲ್ಕೈದು ವರ್ಷ ಕಳೆದರೂ ಮದುವೆ ಮಾಡಿಕೊಟ್ಟಿರಲಿಲ್ಲ.
ಕಳೆದೊಂದು ವಾರದ ಹಿಂದೆ ಉಟ್ಟ ಬಟ್ಟೆಯಲ್ಲಿ ಮಂಜುನಾಥ್ ಕುಟುಂಬದ ಜೊತೆ ಮನುಜ ಬಂದಿದ್ದಳು. ಹಿರಿಯರ ಸಮ್ಮುಖದಲ್ಲಿ ಜನವರಿ 26ರಂದು ಮದುವೆ ಮಾಡಲಾಗಿತ್ತು. ಇತ್ತ ಮನುಜಾ ಪೋಷಕರಿಂದ ತಲಘಟ್ಟಪುರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿದ್ದು, ಈ ವೇಳೆ ತಲಘಟ್ಟಪುರ ಠಾಣೆಯಲ್ಲಿ ತಾನು ಒಪ್ಪಿ ಮದುವೆಯಾಗಿರುವುದಾಗಿ ಹೇಳಿದ್ದಳು. ಇದಾದ ಬಳಿಕ ಮತ್ತೆ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಮೂರು ದಿನದ ಬಳಿಕ ಮಂಜುನಾಥ್ ವಾಪಸ್ ಮನೆಗೆ ಬಂದಾಗ ಮನುಜ ಕಾಣೆಯಾಗಿದ್ದಾಳೆ.
ಮದುವೆ ಆಗಿದ್ದ ಮಾವ ಮಂಜುನಾಥ್, ಮನುಜಾ ಮನೆಗೆ ಬರದೆ ಇದ್ದಾಗ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪತಿ ದೂರು ನೀಡಿದ ಕೆಲವೇ ಹೊತ್ತಿನಲ್ಲಿ ಪೊಲೀಸ್ ಠಾಣೆಗೆ ನಿತಿನ್ ಎಂಬ ಯುವಕನ ಜೊತೆ ಯುವತಿ ದಿಢೀರ್ ಅಂತ ಹಾಜರಾಗಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಏಕಾಏಕಿ ಹೈಡ್ರಾಮಾ ಶುರು ಮಾಡಿದ್ದು ನನಗೆ ಇಷ್ಟ ಇರಲಿಲ್ಲ ಹೆದರಿಸಿ ಬೆದರಿಸಿ ಮದುವೆ ಮಾಡಿದ್ದಾರೆ, ನಾನು ಪೋಷಕರ ಜೊತೆ ಹೋಗುತ್ತೇನೆ ಎಂದು ಕಿರಿಕ್ ಶುರು ಮಾಡಿದ್ದಾಳೆ. ಇತ್ತ ನನಗೆ ಯುವತಿಯಿಂದ ಅನ್ಯಾಯ ಆಗಿದೆ ಎಂದು ಮದುವೆಯಾಗಿದ್ದ ಮಂಜುನಾಥ್, ಪೊಲೀಸ್ ಠಾಣೆ ಎದುರು ಗೋಳಾಟ ನಡೆಸಿದ್ದು ಲವ್ ಹೆಸರಿನಲ್ಲಿ ನನಗೆ ವಂಚನೆ ಮಾಡಿದ್ದಾಳೆ ಎಂದು ಕಣ್ಣೀರು ಹಾಕಿದ್ದಾನೆ.
ಒಟ್ಟಿನಲ್ಲಿ ಮನಸ್ಸಿನಿಂದ ಪ್ರೀತಿಸಿ ಮದುವೆಯಾಗಿದ್ದ ಮಂಜುನಾಥ್ ನನಗೆ ನ್ಯಾಯ ಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೂರ್ನಾಲ್ಕು ಮಂದಿ ಯುವಕರ ಜೊತೆ ಲವ್ ನಾಟಕ ಹಾಗೂ ಯುವಕರ ಜೊತೆ ರೀಲ್ಸ್ ಮಾಡಿ ಫೋಟೋ ತೆಗೆಸಿಕೊಂಡಿರೋ ಯುವತಿ ವಿಷಯ ತಿಳಿದು ಮಂಜುನಾಥ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.