ಆಗ್ರಾದ ಲೋಹ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲೆ ಮರೆಸಿಕೊಂಡಿದ್ದ ಗೂಂಡಾ ಶಾನೂ ಕುರೇಶಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. ಪೊಲೀಸರ ಸಮವಸ್ತ್ರ ಕೂಡ ಹರಿದು ಹಾಕಿ ಹೆಸರಿನ ಪಟ್ಟಿ ತೆಗೆದು ಅವರ ವಾಹನ ಧ್ವಂಸ ಮಾಡಿದ್ದಾಗಿ ವರದಿಯಾಗಿದೆ. ಈ ಘಟನೆ ಆಲಂಗಂಜ್‌ನಲ್ಲಿ ನಡೆದಿದೆ.
ಸ್ಥಳೀಯ ವ್ಯಕ್ತಿಗಳು ಪೊಲೀಸರಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ. ಈ ಹೊಡೆದಾಟದಲ್ಲಿ ಪೊಲೀಸ ಅಧಿಕಾರಿ ಅರುಣ ಕುಮಾರ ಎಂಬವರಿಗೆ ಗಾಯವಾಗಿದೆ. ಈ ಘಟನೆ ನವಂಬರ್ ೨೪ ರಂದು ಸಂಜೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾನೂ ಕುರೇಶಿ, ಅವನ ತಂದೆ ಹಾಜಿ ಮಹಮ್ಮದ್, ಸಹೋದರನ ಸಹಿತ ಇಮ್ರಾನ್, ಗುಲಫಾಂ, ಅಸ್ಲಂ, ತೋತಲ್ ಪಠಾಣ್, ನದೀಂ ಸಹಿತ ೨೫ ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ್ದಾರೆ. ಪೊಲೀಸ್ ಮೋಟಾರ್‌ಸೈಕಲ್ ಅನ್ನು ಹಾನಿಗೊಳಿಸಿದರು ಮತ್ತು ಸಬ್ ಇನ್‌ಸ್ಪೆಕ್ಟರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಮೇಲೆ ಕಲ್ಲು ತೂರಿದ್ದಾಗಿ ಸಹಾಯಕ ಕಮಿಷನರ್ ದೀಕ್ಷಾ ಸಿಂಗ್ ಖಚಿತಪಡಿಸಿದ್ದಾರೆ.
“ಲೋಹಾ ಮಂಡಿ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 327 (ಕಾನೂನುಬಾಹಿರ ಕೃತ್ಯಕ್ಕೆ ನೋವುಂಟು ಮಾಡುವುದು), 332 (ಸಾರ್ವಜನಿಕ ಸೇವಕರಿಗೆ ನೋವುಂಟು ಮಾಡುವುದು), 353 (ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 147 (ಗಲಭೆ) ಮತ್ತು 148 (ಮಾರಣಾಂತಿಕ ಆಯುಧದಿಂದ ಗಲಭೆ) ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕ ಸೇವಕರನ್ನು ತಡೆಯಲು ಒತ್ತಾಯಿಸಿ,” ಎಂದು ಪೊಲೀಸ್ ಸಹಾಯಕ ಕಮಿಷನರ್ ದೀಕ್ಷಾ ಸಿಂಗ್ ಹೇಳಿದ್ದಾರೆ.