Wednesday, February 19, 2025

ಕರಾವಳಿಯಲ್ಲಿ ಈ ಬಾರಿ ಅತ್ಯಧಿಕ ಡೆಂಗ್ಯೂ ಪ್ರಕರಣ‌ ದಾಖಲು

ಹವಾಮಾನ ವೈಪರೀತ್ಯದಿಂದ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಕರಾವಳಿಯಲ್ಲಿ ಈ ವರ್ಷ ಅತ್ಯಧಿಕ ಡೆಂಗ್ಯೂ ಪ್ರಕರಣ ಗಳು ವರದಿಯಾಗಿವೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಅತೀ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ.

2020ರಲ್ಲಿ ದ.ಕ.ದಲ್ಲಿ 239 ಪ್ರಕರಣ ಇದ್ದರೆ 2023ರಲ್ಲಿ 426ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 139 ಇದ್ದುದು 618ಕ್ಕೆ ಏರಿದೆ. ಕರಾವಳಿಯಲ್ಲಿ ಈ ವರ್ಷದ ಮಳೆಗಾಲ ಉತ್ತಮವಾಗಿರಲಿಲ್ಲ. ಧಾರಾಕಾರ ಮಳೆ ಸುರಿಯುವ ಬದಲು ಬಿಸಿಲು-ಮಳೆ ಕಣ್ಣಾಮುಚ್ಚಾಲೆ ಯಿಂದ ಅಲ್ಲಲ್ಲಿ ನೀರು ಶೇಖರಗೊಂಡು ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಅನುಕೂಲ ಸೃಷ್ಟಿಸುತ್ತಿದೆ.

ನಗರ ಭಾಗದಲ್ಲೇ ಅತ್ಯಧಿಕ !
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಗರ ಭಾಗದಲ್ಲೇ ಅಧಿಕ ಡೆಂಗ್ಯೂ ಪ್ರಕರಣ ದಾಖಲಾಗಿವೆ.

ಒಟ್ಟು ಪ್ರಕರಣಗಳಲ್ಲಿ ಶೇ. 60ರಷ್ಟು ನಗರ ಭಾಗದಿಂದಲೇ ವರದಿಯಾಗಿವೆ. ನಗರಕ್ಕೆ ವಿವಿಧ ಜಿಲ್ಲೆ, ಹೊರ ರಾಜ್ಯದಿಂದ ಉದ್ಯೋಗ, ಶಿಕ್ಷಣ ಸಂಬಂಧ ಜನರು ಬರುತ್ತಿದ್ದು, ಅವರಲ್ಲೇ ಕೆಲವರಿಗೆ ರೋಗ ಲಕ್ಷಣ ಕಂಡುಬಂದಿದೆ.

ಮಂಗಳೂರಿನಲ್ಲಿ ವೆಲೆನ್ಸಿಯ, ಜಪ್ಪು, ಬಂದರು ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಪಾಲಿಕೆಯಿಂದ ವಿಶೇಷ ನಿಗಾ ಇರಿಸಲಾಗಿದೆ.

Related Articles

Latest Articles