Friday, June 27, 2025

ದಾಂಪತ್ಯ ಜೀವನಕ್ಕೆ ‌ಕಾಲಿಟ್ಟ ಕೀರ್ತಿ ಸುರೇಶ್ – ವರ ಯಾರು? ಎಷ್ಟು ವರ್ಷದ ನಂಟು ಗೊತ್ತಾ?

ಬಹುಭಾಷಾ ನಟಿ ಕೀರ್ತಿ ಸುರೇಶ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಗೆಳೆಯ ಆಂಟೊನಿ ತಟ್ಟಿಲ್ ಜೊತೆ ಅವರು ಹಸೆಮಣೆ ಏರಿದ್ದಾರೆ.

ದಕ್ಷಿಣ ಭಾರತದ ಸಂಪ್ರದಾಯದ ರೀತಿ ಕೀರ್ತಿ ಸುರೇಶ್ ಅವರ ಮದುವೆ ಗೋವಾದಲ್ಲಿ ನಡೆದಿದೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ಅವರು ಮದುವೆ ಆಗಿದ್ದಾರೆ.

ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ‘ಮಹಾನಟಿ’ ಕೀರ್ತಿ ಸುರೇಶ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಕೀರ್ತಿ ಸುರೇಶ್ ಪತಿ ಆಂಟನಿ ಥಟ್ಟಿಲ್ ದುಬೈ ಮೂಲದ ಉದ್ಯಮಿಯಾಗಿದ್ದಾರೆ. ಆಂಟನಿ ಅವರು ಕೊಚ್ಚಿಯಲ್ಲಿ ಹಲವಾರು ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ.

ಗೆಳೆಯ ಆಂಟನಿ ಥಟ್ಟಿಲ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ತಾವು ರಿಲೇಶನ್‌ಶಿಪ್‌ನಲ್ಲಿರೋ ವಿಷಯವನ್ನು ರಿವೀಲ್ ಮಾಡಿದ್ದಾರೆ. ಕೀರ್ತಿ ಸುರೇಶ್ ಮತ್ತು ಆಂಟನಿ ಥಟ್ಟಿಲ್ 15 ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.

Related Articles

Latest Articles