Tuesday, March 18, 2025

ಪೇಜಾವರ ಶ್ರೀಗಳಿಗೆ ಅವಾಚ್ಯ ನಿಂದನೆ, ಜೀವ ಬೆದರಿಕೆ – ಭೀಮ್ ಆರ್ಮಿ ಸಂಘಟನೆಯ ಮುಖಂಡನ ಮೇಲೆ ಎಫ್.ಐ.ಆರ್ ದಾಖಲು

ಉಡುಪಿ ಕೃಷ್ಣ ಮಠದ ಪೇಜಾವರ ಶ್ರೀಗಳಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿ ದುಷ್ಕರ್ಮಿಯ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಭೀಮ್ ಆರ್ಮಿ ಸಂಘಟನೆಯ ಮತಿನ್ ಕುಮಾರ್ ಬಿಜಾಪುರ ಎಂಬಾತ ಎ ವನ್ ನ್ಯೂಸ್ ಚಾನಲ್‌ನಲ್ಲಿ ಉಡುಪಿ ಕೃಷ್ಣ ಮಠದ ಪೇಜಾವರ ಅಧೋಕ್ಷಜ ಪೀಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.

ಈತ ಮಾತನಾಡುತ್ತಾ ಪೇಜಾವರ ಶ್ರೀಗಳಿಗೆ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿದ್ದಾನೆ. ಸುಮ್ಮನೆ ಕೂತರೆ ಸರಿ ಮುಂದೆ ಏನಾದರೂ ನಾಟಕ ಮಾಡಿದರೆ ಎರಡನೇ ಭೀಮ ಕೋರೆಗಂವ್ ಯುದ್ಧ ಅಲ್ಲೇ ಉಡುಪಿ ಮಠದ ಮುಂದೆ ಆಗುತ್ತೆ. ಒಂದಲ್ಲ ಒಂದು ಸಲ ಯುದ್ಧ ಆಗುತ್ತದೆ. ಮಗನೇ ನಿನ್ನ ಜೊತೆ ಎಷ್ಟು ಹಿಂದುಗಳು ಇದ್ದಾರಲ್ವಾ? ಅವರನ್ನೆಲ್ಲ ಕರೆಸಿಕೊಂಡು ನಮಗೆ ಕರೆ ಕೊಡು ನಾವು ದಲಿತರ ತಾಕತ್ತು ಏನು ಅಂತ ತೋರಿಸುತ್ತೇವೆ. ನನ್ನ ಮಗನೇ ಎಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರವನ್ನು ಪ್ರಚೋದಿಸಿ ಮತ್ತು ಪೇಜಾವರ ಶ್ರೀಗಳಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದಾನೆ.

ಹಿಂದೂ ಸಮಾಜದ ಪ್ರಮುಖ ಗುರುಗಳಾಗಿರುವ ಪೇಜಾವರ ಶ್ರೀಗಳನ್ನು ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ ನಮ್ಮ ಧರ್ಮದ ನಿಂದನೆಯನ್ನು ಮಾಡಿದ್ದನ್ನು ಹಿಂದೂ ಜಾಗರಣ ವೇದಿಕೆ‌ ಖಂಡಿಸಿದ್ದು ದೂರು ದಾಖಲಿಸಲಾಗಿದೆ‌.

ಭಾರತೀಯ ನ್ಯಾಯ ಸಂಹಿತೆ BNS 2023 U/s-362,351(2),353(2),296 ಅನ್ವಯ ಪ್ರಕರಣ ದಾಖಲಾಗಿದೆ.

ಈ ವೇಳೆ ಮುಖಂಡರಾದ ಶ್ರೀಕಾಂತ್ ಶೆಟ್ಟಿ, ಮಹೇಶ್ ಬೈಲೂರ್, ಉಮೇಶ್ ಸೂಡ, ಹರೀಶ್ ಬಜಗೋಳಿ, ಗುರುಪ್ರಸಾದ್ ಸೂಡ, ನಿಖಿಲ್ ಮಂಚಿ ಜೊತೆಗಿದ್ದರು.

Related Articles

Latest Articles