ಮಲಪ್ಪುರಂ: ಪತ್ನಿಗೆ ಅಂತಿಮ ನಮನ ಸಲ್ಲಿಸುವಾಗಲೇ ಕುಸಿದು ಬಿದ್ದ ಗಂಡ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಲಪ್ಪುರಂ ಮಸೀದಿಯೊಂದರಲ್ಲಿ ರಮ್ಲಾ(63) ಎಂಬವರ ಅಂತ್ಯಕ್ರಿಯೆ ನಡೆಯುತ್ತಿತ್ತು. ಈ ವೇಳೆ ಗಂಡ ಜಲೀಲ್ ಮೊಯ್ದೀನ್ (76) ಅಂತಿಮ ನಮನ ಸಲ್ಲಿಸುವಾಗ ಕುಸಿದು ಬಿದ್ದು ಅಸುನೀಗಿದ್ದಾರೆ. ಆ ಮೂಲಕ ಜೋಡಿ ಸಾವಿನಲ್ಲೂ ಒಂದಾಗಿದೆ.
ನ. 19 ಮಂಗಳವಾರ ಬೆಳಗ್ಗೆ 10.30ಕ್ಕೆ ಕೋಟಿಲ್ ಜುಮಾ ಮಸೀದಿ ವಠಾರದಲ್ಲಿ ರಮ್ಲಾ ಅವರ ಅಂತ್ಯಕ್ರಿಯೆ ನಮಾಝ್ ನಿಗದಿಯಾಗಿತ್ತು. ಸಮಾರಂಭ ಆರಂಭವಾಗುತ್ತಿದ್ದಂತೆಯೇ ಮೊಯ್ದೀನ್ ಅವರಿಗೆ ಅಸ್ವಸ್ಥವಾಗಿತ್ತು. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ.
ಇಬ್ಬರ ಅಗಲುವಿಕೆಯಿಂದ ಮಕ್ಕಳ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ ತಾಯಿಯ ಅಂತ್ಯಸಂಸ್ಕಾರವನ್ನು ಮಕ್ಕಳು ನೆರವೇರಿಸಿದರು.