Friday, June 27, 2025

ಪುತ್ತೂರು: ಆನ್‌ಲೈನ್‌ ಮಹಾಮೋಸ – ಬರೋಬ್ಬರಿ ಅರ್ಧ ಕೋಟಿಗೂ ಅಧಿಕ ಹಣ ಕಳೆದುಕೊಂಡ ವ್ಯಕ್ತಿ

ಪುತ್ತೂರು: ವಾಟ್ಸಾಪ್ ನಲ್ಲಿ ಬಂದ ಪಾರ್ಟ್ ಟೈಮ್ ಉದ್ಯೋಗವನ್ನು ನಂಬಿ ಪುಸ್ತಕ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 56 ಲಕ್ಷ ರೂ ಕಳೆದುಕೊಂಡ ಘಟನೆ ವರದಿಯಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಪ್ರಕರಣದ ವಿವರ: 10-10-2024 ರಂದು ವಾಟ್ಸಪ್‌ ಗೆ ಟಾಸ್ಕ್‌ ಬಗ್ಗೆ ಮೆಸೇಜ್‌ ಬಂದಿದೆ. ಮೆಸೇಜ್‌ ಮಾಡಿ ಟಾಸ್ಕ್‌ ಬಗ್ಗೆ ಕೇಳಿದ್ದಕ್ಕೆ Youtube ಲಿಂಕ್‌ ಕಳುಹಿಸಿ, ಆ ವೀಡಿಯೋ ಲಿಂಕ್‌ ಓಪನ್‌ ಮಾಡಿ ಸಬ್‌ಸ್ಕ್ರೈಬ್‌ ಮಾಡಿ ಅದರ ಸ್ಕ್ರೀನ್‌ಶಾಟ್‌ ನ್ನು ವಾಟ್ಸಪ್‌ನಲ್ಲಿ ಕಳುಹಿಸಿದರೆ ಹಣ ಸಿಗುವುದಾಗಿ ದುಷ್ಕರ್ಮಿಗಳು ತಿಳಿಸಿದ್ದಾರೆ. ಎರಡು ಟಾಸ್ಕ್‌ ಕಂಪ್ಲೀಟ್‌ ಮಾಡಿ ಸ್ಕ್ರೀನ್‌ ಶಾಟ್‌ ಕಳುಹಿಸಿ, ನಂತರ ಟೆಲಿಗ್ರಾಂಗೆ ಜಾಯಿನ್‌ ಆಗಲು ಲಿಂಕ್‌ ಕಳುಹಿಸಿದ್ದಾರೆ.‌

ನಂತರ ಸದ್ರಿ ಟಾಸ್ಕ್‌ಗಾಗಿ ಟೆಲಿಗ್ರಾಂ ಖಾತೆಗೆ ಪ್ರೊಪೈಲ್‌ ಹಾಗೂ ಯುಪಿಐ ಲಿಂಕನ್ನು ನೀಡಿದ್ದು, ಟಾಸ್ಕ್‌ ಕಂಪ್ಲೀಟ್‌ ಮಾಡಿದ್ದಕ್ಕೆ ತಲಾ ರೂ.123/- ರಂತೆ ಒಟ್ಟು ರೂ.492/- ಹಣ ಬಂದಿದೆ.‌

ಹಣ ಬಂದಿರುವುದನ್ನು ನಂಬಿ ಆ ನಂತರ ಅವರು ಹಣ ಡಿಪಾಸಿಟ್‌ ಮಾಡಿದರೆ ಕಮೀಷನ್‌ ಸಿಗುವ ಟಾಸ್ಕ್‌ ನ್ನು ನೀಡಿದ್ದಕ್ಕೆ, ತನ್ನ ಹಾಗೂ ತನ್ನ ಗೆಳೆಯರ ಬ್ಯಾಂಕ್‌ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತಹಂತವಾಗಿ ಹಣ ವರ್ಗಾಯಿಸಿದ್ದಾರೆ.

ಕಮಿಷನ್ ನಲ್ಲಿ ಸುಮಾರು ರೂ.52,000/- ಹಣ ಬಂದಿದ್ದು, ಬೇರೆ ಯಾವುದೇ ಹಣ ವಾಪಾಸ್‌ ಬಂದಿಲ್ಲ. ಆನ್‌ಲೈನ್‌ ನಲ್ಲಿ ಟಾಸ್ಕ್‌ ಮಾಡಲು ಹೋಗಿ ವ್ಯಕ್ತಿ ಬರೋಬ್ಬರಿ ರೂ.56,71,910/- ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಿಇಎನ್‌ ಅಪರಾಧ ಪೊಲೀಸು ಠಾಣೆ ಅ.ಕ್ರ:53/2024 ಕಲಂ : 66 (D) IT Act. 61(2),318(2), 318(4) BNS Act ಯಂತೆ ಪ್ರಕರಣ ದಾಖಲಾಗಿದೆ.

Related Articles

Latest Articles