ಪಾರು ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟಿ ಮಾನ್ಸಿ ಜೋಶಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕನ್ನಡದಿಂದ ತಮ್ಮ ಜರ್ನಿಯನ್ನು ಶುರುಮಾಡಿದ ನಟಿ ಈಗ ಮಲಯಾಳಂ, ತೆಲುಗು, ತಮಿಳು ಧಾರಾವಾಹಿಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ಕನ್ನಡತಿ ಮಾನ್ಸಿ ಜೋಶಿ.
ತೆಲುಗು, ತಮಿಳು ಅಷ್ಟೇ ಯಾಕೇ ಮಲಯಾಳಂನಲ್ಲೂ ಇವರು ಸಖತ್ ಫೇಮಸ್ ಆಗಿದ್ದಾರೆ. ಒಟ್ಟಾರೆ ಸೌತ್ ಇಂಡಿಯಾದ ಎಲ್ಲಾ ಸೀರಿಯಲ್ ವೀಕ್ಷಕರಿಗೂ ಮಾನ್ಸಿ ಚಿರಪರಿಚಿತ ಅಂಡ್ ಫೇವರಿಟ್ ಆ್ಯಕ್ಟ್ರೆಸ್. ಪರಭಾಷೆಯಲ್ಲಿ ಸಖತ್ ಬ್ಯುಸಿಯಾಗಿರೋ ಮಾನ್ಸಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಹೌದು, ನಟಿ ಮಾನ್ಸಿ ಅವರು ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿ ನಟಿ ಮಾನ್ಸಿ, ರಾಘವ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿರೋ ರಾಘವ್, ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈ ಕ್ಯೂಟ್ ಜೋಡಿಯ ಮದುವೆಯ 2025ರ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಇನ್‌ಫ್ಯಾಕ್ಟ್ ಮಾನ್ಸಿ ಮತ್ತು ಮೋಕ್ಷಿತಾ ಅವರು ಆತ್ಮೀಯ ಗೆಳತಿ. ಮೋಕ್ಷಿತಾ ಬಿಗ್‌ಬಾಸ್‌ಗೆ ಹೋಗಿರೋದರಿಂದ ಬೆಸ್ಟ್ ಫ್ರೆಂಡ್‌ನ ಎಂಗೇಜ್‌ಮೆಂಟ್ ಮಿಸ್ ಮಾಡ್ಕೊಂಡಿದ್ದಾರೆ.