Friday, June 27, 2025

ಪ್ಯಾರಿಸ್ ಪ್ಯಾರಾ ಒಲಿಂಪಿಕ್: ಜಾವೆಲಿನ್ ಥ್ರೋ, ಹೈ ಜಂಪ್‌ನಲ್ಲಿ ಭಾರತಕ್ಕೆ ನಾಲ್ಕು ಪದಕ‌

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಪುರುಷರ ಜಾವೆಲಿನ್ ಥ್ರೋ F46 ಈವೆಂಟ್‌ನಲ್ಲಿ ಭಾರತದ ಅಜೀತ್ ಸಿಂಗ್ ಮತ್ತು ಸುಂದರ್ ಸಿಂಗ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಮಂಗಳವಾರ ಸ್ಟೇಡ್ ಡಿ ಫ್ರಾನ್ಸ್‌ ಸ್ಟೇಡಿಯಂ ನಲ್ಲಿ ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪೈಪೋಟಿ ಕಂಡು ಬಂದಿತ್ತು. ಅದರಲ್ಲೂ ಮೂವರು ಭಾರತೀಯರು ಟಾಪ್-5 ಹಣಾಹಣಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

ಇನ್ನು ಈ ಎರಡು ಜಾವೆಲಿನ್ ಪದಕಗಳಿಗೂ ಮುನ್ನ, ಮಹಿಳೆಯರ 400 ಮೀಟರ್ ಟಿ20 ಸ್ಪರ್ಧೆಯಲ್ಲಿ ಭಾರತದ ದೀಪ್ತಿ ಜೀವನಜಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಜಾವೆಲಿನ್ ಎಸೆತ‌ ಮಾತ್ರವಲ್ಲದೆ ಮತ್ತೊಂದು ಕ್ರೀಡೆಯಲ್ಲೂ ಭಾರತ ಎರಡು ಪದಕ ಪಡೆದುಕೊಂಡಿದೆ.‌ ಪುರುಷರ ಹೈ ಜಂಪ್ ವಿಭಾಗದಲ್ಲೂ ಭಾರತ ಅಗ್ರಗಣ್ಯ ಸಾಧನೆ ಮಾಡಿದೆ. ಆ ಮೂಲಕ ಒಟ್ಟು ಪದಕಗಳ ಅಂಕಿ ಇಪ್ಪತ್ತಕ್ಕೆ ಏರಿಕೆ ಕಂಡಿದೆ.

ಪುರುಷರ ಹೈಜಂಪ್ ಟಿ63 ವಿಭಾಗದಲ್ಲಿ ಶರದ್ ಕುಮಾರ್ ಬೆಳ್ಳಿ ಗೆದ್ದರೆ, ಮರಿಯಪ್ಪನ್ ತಂಗವೇಲು ಕಂಚು ಗೆದ್ದರು. ಇದೇ ಸ್ವರ್ಧೆಯಲ್ಲಿ ನಾಲ್ಕನೇ ಸ್ಥಾನಿಯೂ ಭಾರತೀಯ ಎಂಬುವುದು ವಿಶೇಷ. ಪದಕ ರೌಂಡ್‌ನ ಎಂಟು ಫೈನಲ್ ಅಭ್ಯರ್ಥಿಗಳಲ್ಲಿ ಮೂವರು ಭಾರತೀಯರಿದ್ದರು.

ಒಟ್ಟಿನಲ್ಲಿ ಟೋಕಿಯೋ ಪ್ಯಾರಾ ಒಲಿಂಪಿಕ್ ದಾಖಲೆಯನ್ನು ಮುರಿದಿದ್ದಾರೆ. ಟೋಕಿಯೋ ಪ್ಯಾರಾ ಒಲಿಂಪಿಕ್ ನಲ್ಲಿ 19 ಪದಕ ಗೆದ್ದ ಭಾರತ ಈಗ 20 ಪದಕ ಗೆದ್ದು ಸಂಭ್ರಮಿಸಿದೆ‌. ಪದಕ ಭೇಟೆ ಇನ್ನೂ ಇದೆ.‌

Related Articles

Latest Articles