Tuesday, April 22, 2025

ಇನ್ನುಮುಂದೆ ಕನ್ನಡಕ ಬೇಕೆಂದಿಲ್ಲ; ಐ ಡ್ರಾಪ್‌ ಹಾಕಿದರಷ್ಟೇ ಸಾಕು – ಭಾರತದಲ್ಲಿಯೂ ಲಭ್ಯ

ವೈದ್ಯ ವಿಜ್ಞಾನ‌ ನಿಂತ ನೀರಲ್ಲ. ಅಲ್ಲಿ ದಿನಕ್ಕೊಂದರಂತೆ ಹಲವಾರು ಆವಿಷ್ಕಾರಗಳು ಆಗುತ್ತಲೇ ಇರುತ್ತದೆ. ಹೊಸ ಹೊಸ ಆವಿಷ್ಕಾರ ಮಾನವನ ಸಮಸ್ಯೆಗೆ ಮುಕ್ತಿ ನೀಡುತ್ತಿವೆ. ಕೆಲವೊಂದು ಅಡ್ಡ ಪರಿಣಾಮ ಬೀರುವುದೂ ಇದೆ. ಸದ್ಯ ಈ ವರದಿ ಹಡಿದಾಡುತ್ತಿದೆ. ಸನಿಹದಲ್ಲಿರುವ ವಸ್ತು ಗಳನ್ನು ಸರಿಯಾಗಿ ನೋಡಲು ಕಣ್ಣಿಗೆ ಕನ್ನಡಕ ಧರಿಸಬೇಕಾದ ಪರಿಸ್ಥಿತಿ ಸದ್ಯದಲ್ಲೇ ದೂರವಾಗುವ ನಿರೀಕ್ಷೆಯಿದೆ.

ಹೌದು, ಇನ್ನು ಓದಲು ಕನ್ನಡಕ ಬೇಕೇಬೇಕು ಎಂದೇನಿಲ್ಲ. ಅದರ ಬದಲಿಗೆ ಐ ಡ್ರಾಪ್‌ ಹಾಕಿದರೆ ಸಾಕು. ಎಲ್ಲ ಅಕ್ಷರಗಳೂ ಸ್ಪಷ್ಟವಾಗಿ ಗೋಚರಿಸುತ್ತವೆ.

ಮುಂಬಯಿಯ ಎಂಟೋಡ್‌ ಫಾರ್ಮಾಸ್ಯೂಟಿ ಕಲ್ಸ್‌ ಎಂಬ ಕಂಪೆನಿ “ಪ್ರಸ್‌ವು’ ಎಂಬ ಐ ಡ್ರಾಪ್ಸ್‌ ಸಿದ್ಧಪಡಿಸಿದೆ. ಇದು ಕಣ್ಣಿನ ಪಾಪೆಯ ಗಾತ್ರವನ್ನು ತಗ್ಗಿಸಿ, ವಸ್ತುಗಳು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. ಇದನ್ನು ಬಳಸಿದರೆ ಮುಂದಿನ 6 ತಾಸುಗಳ ಕಾಲ ಸನಿಹದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು.

ಮೊದಲ ಹನಿ ಹಾಕಿ 3ರಿಂದ 6 ತಾಸುಗಳ ಒಳೊಳಗೆ ಇನ್ನೊಂದು ಹನಿ ಹಾಕಿದರೆ ಈ ನೋಟದ ಅವಧಿ ಇನ್ನಷ್ಟು ದೀರ್ಘ‌ವಾಗಲಿದೆ ಎಂದು ಎಂಟೋಡ್‌ ಫಾರ್ಮಾ ಕಂಪೆನಿಯ ಸಿಇಒ ನಿಖೀಲ್‌ ಕೆ. ಮಸೂರ್ಕರ್‌ ಹೇಳಿದ್ದಾರೆ.

ಭಾರತೀಯರ ಮೇಲೂ ಪರೀಕ್ಷೆ
ಈಗಾಗಲೇ ಇಂತಹ ಔಷಧಗಳು ವಿದೇಶ ಗಳಲ್ಲಿ ಲಭ್ಯವಿವೆ. ಆದರೆ ಅವನ್ನು ಭಾರತೀಯ ಕಣ್ಣುಗಳಿಗೆ ಹಾಕಿ ಪರಿಶೀಲನೆ ನಡೆಸಿರಲಿಲ್ಲ. ಈ ಔಷಧವನ್ನು ಭಾರತೀಯ ಕಣ್ಣುಗಳಿಗೆ 2 ವರ್ಷ ಹಾಕಿ ಪರಿಶೀಲಿಸಲಾಗಿದೆ. ಒಟ್ಟು 10 ಸ್ಥಳಗಳಲ್ಲಿ 250 ಮಂದಿಯ ಮೇಲೆ ಇದರ ಪರೀಕ್ಷೆ ನಡೆಸಲಾಗಿದೆ. ಇದಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿಯನ್ನೂ ನೀಡಿದೆ.

Related Articles

Latest Articles