Friday, June 27, 2025

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಮನು ಭಾಕರ್‌ರಂತೆ ಅವಳಿ ಪದಕ ಗೆದ್ದಿದ್ದ ಅವನಿ ಲೇಖರ..! ಈ ಬಾರಿಯೂ ಪದಕ ನಿರೀಕ್ಷೆ

ಆಗಸ್ಟ್ 28ರಿಂದ ಸೆಪ್ಟೆಂಬ‌ರ್ 8ರವರೆಗೆ ನಿಗದಿಯಾಗಿರುವ ಪ್ಯಾರಾಲಿಂಪಿಕ್ಸ್ ಕೂಟಕ್ಕೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಸಜ್ಜುಗೊಂಡಿದೆ. ಕಳೆದ ಬಾರಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ ಒಟ್ಟು 19 ಪದಕ ಸಾಧನೆಯೊಂದಿಗೆ, ಕ್ರೀಡಾಕೂಟದ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನ ದಾಖಲಿಸಿದ್ದ ಭಾರತ ಈ ಬಾರಿ 84 ಪ್ಯಾರಾ ಕ್ರೀಡಾಳುಗಳು ಕಣಕ್ಕೆ ಇಳಿಯಲಿದ್ದಾರೆ. ಆ ಮೂಲಕ ಪದಕದ ಅಂಕಿಗಳನ್ನು ಇನ್ನಷ್ಟು ಏರಿಕೆ ಮಾಡಲಿದ್ದಾರೆ.

ಇದುವರೆಗಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಗರಿಷ್ಠ ಕ್ರೀಡಾಪಟುಗಳ ತಂಡ ಇದಾಗಿದೆ. ಕನಿಷ್ಠ 25 ಪದಕಗಳ ನಿರೀಕ್ಷೆ ಇಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಚಿನ್ನದ ಪದಕ ಗೆಲ್ಲಲು ವಿಫಲರಾಗಿದ್ದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಆ ನಿರಾಸೆಯನ್ನು ಬದಿಗೊತ್ತಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡಬಹುದಾದ ಚಿನ್ನದ ಹುಡುಗಿಯ ಬಗ್ಗೆ ನಿಮಗೊತ್ತಾ?

ಪ್ಯಾರಿಸ್ ಒಲಿಂಪಿಕ್ ಹಾಗೂ ಒಲಿಂಪಿಕ್ ಇತಿಹಾಸದಲ್ಲೇ ಮನು ಭಾಕರ್‍ ತೋರಿದ ಅಪ್ರತಿಮ ಸಾಧನೆ ಬಗ್ಗೆ ಎಲ್ಲರೂ ಕೊಂಡಾಡುತ್ತಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಮನುಭಾಕರ್‍ ಅವರ ಸಾಧನೆಯಂತೆ ಮತ್ತೊಬ್ಬ ಮಹಿಳಾ ಕ್ರೀಡಾಳು ಅವನಿ ಲೇಖರ.

ಮಹಿಳಾ ಶೂಟರ್ ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದ ಬಳಿಕ ಎಲ್ಲರ ಗಮನ ಪ್ಯಾರಾ ಶೂಟರ್ ಅವನಿ ಲೇಖರ ಕಡೆಗಿದೆ. ರಾಜಸ್ಥಾನದ ಅವನಿ ಲೇಖರ ಟೋಕಿಯೊ ಗೇಮ್ಸ್‌ನ ಎಸ್‌ಎಚ್ 10 ಮೀಟರ್ ಏರ್ ರೈಲ್‌ನಲ್ಲಿ ಚಿನ್ನ ಹಾಗೂ 50 ಮೀಟರ್ ರೈಲ್‌ನಲ್ಲಿ ಕಂಚಿನ ಪದಕದೊಂದಿಗೆ ಒಂದೇ ಆವೃತ್ತಿಯಲ್ಲಿ ಅವಳಿ ಪದಕ ಜಯಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಅಥೀಟ್ ಎನಿಸಿದ್ದರು.

22 ವರ್ಷದ ಅವನಿ ಕಳೆದ ಬಾರಿಯ ಪದಕ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದು, ಇವರಿಗೆ ಕರ್ನಾಟಕದ ಮಾಜಿ ಒಲಿಂಪಿಯನ್ ಶೂಟರ್ ಸುಮಾ ಶಿರೂರು ಮಾರ್ಗದರ್ಶನ ನೀಡುತ್ತಿದ್ದಾರೆ. 2022ರ ಏಷ್ಯನ್ ಪ್ಯಾರಾ ಗೇಮ್‌ನಲ್ಲೂ ಅವನಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

Gold medallist from the Tokyo Games three years ago, Lekhara will be setting her sights on back-to-back Paralympic gold medals that will make her the first Indian para-shooter to achieve the feat. And it’s not just a gold in Women’s R2 10 metre air rifle standing SH1 — she had also won a bronze in the R8 50 metre Rifle 3 positions SH1 event. Having medalled in both events the last time, Lekhara will even be dreaming of winning two medals in the same Paralympics — which will no doubt cement her status as one of the greatest Indian para-athletes of all time, if not the greatest.

Related Articles

Latest Articles