Friday, June 27, 2025

ಪದಕದ ಗುರಿಯತ್ತ ಸ್ವಪ್ನಿಲ್ ಕುಸಾಲೆ; ಫೈನಲ್ ಪ್ರವೇಶಿಸಿದ ಭಾರತೀಯ ಶೂಟ‌ರ್

ಪ್ಯಾರಿಸ್‌ ಒಲಿಂಪಿಕ್ಸ್ 2024ರಲ್ಲಿ ಭಾರತದ ಕ್ರೀಡಾಪಟುಗಳು ಜುಲೈ 31 ಬುಧವಾರದಂದು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಬುಧವಾರ ಕೂಡ ಭಾರತದ ಕ್ರೀಡಾಪಟುಗಳು ಗೆಲುವಿನ ನಾಗಲೋಟ ಮುಂದುವರೆಸಿದ್ದಾರೆ.

ಭಾರತದ ಸ್ಟಾರ್ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಸ್ಥಾನಗಳ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಬುಧವಾರ ನಡೆದ ಅರ್ಹತಾ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದು ಅಗ್ರ-8ರಲ್ಲಿ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರು. ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅರ್ಹತಾ ಈವೆಂಟ್‌ನ ಅಗ್ರ ಎಂಟರೊಳಗೆ ಪ್ರವೇಶಿಸಲು ಸಾಧ್ಯವಾಗದೆ ಸ್ಪರ್ಧೆಯಿಂದ ಹೊರಗುಳಿದರು.

ಸ್ವಪ್ನಿಲ್ ಕುಸಾಲೆ ಫೈನಲ್ ಪ್ರವೇಶಿಸುವ ಮೂಲಕ ಮನು ಭಾಕರ್, ಅರ್ಜುನ್ ಬಾಬುತಾ, ಸರಬೋತ್ ಸಿಂಗ್ ಮತ್ತು ರಮಿತಾ ಜಿಂದಾಲ್ ಬಳಿಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ 5ನೇ ಶೂಟ‌ರ್ ಎನಿಸಿಕೊಂಡರು. ಆಗಸ್ಟ್ 1 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಸ್ವಪ್ಟಿಲ್ ಪದಕಕ್ಕೆ ಗುರಿ ನೀಡುವ ನಿರೀಕ್ಷೆಯಿದೆ.

Related Articles

Latest Articles