Friday, June 27, 2025

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ವಿಕಿಪೀಡಿಯಾ ಪೇಜ್..! ಏನೆಲ್ಲಾ ಮಾಹಿತಿ ಇದೆ ಗೊತ್ತಾ?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ವಿಕಿಪಿಡಿಯಾವೂ ಪೇಜ್ ಓಪನ್ ಮಾಡಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. 2024ರ ಜೂನ್​ ತಿಂಗಳಲ್ಲಿ ಅತಿ ಹೆಚ್ಚು ಚರ್ಚೆ ಆದ ಟಾಪಿಕ್​ ಹಿನ್ನಲೆ ವಿಕಿಪೀಡಿಯಾ ಪುಟ ತೆರೆದಿದೆ. ಗೂಗಲ್‌ ನಲ್ಲಿ ರೇಣುಕಾಸ್ವಾಮಿ ಕೊಲೆ ಎಂದು ಸರ್ಚ್‌ ಮಾಡಿದ್ರೆ ವಿಕಿಪೀಡಿಯಾ ಪುಟವೇ ಮೊದಲು ಕಾಣಿಸಿಕೊಳ್ಳಲಿದೆ.

ಜೂನ್​ 8ರಂದು ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂತು. ಅಂದಿನಿಂದ ಇಂದಿನ ತನಕ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಈ ಕೇಸ್​ ಮುಂದುವರಿಯುತ್ತಿದೆ. ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೊಲೆ ಆರೋಪದಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕರನ್ನು ಬಂಧಿಸಿದ್ದಾರೆ. ಈ ಎಲ್ಲ ಘಟನೆಗಳಿಗೆ ಸಂಬಂಧಪಟ್ಟಂತೆ ಈಗ ವಿಕಿಪೀಡಿಯಾ ಪುಟ ಓಪನ್​ ಆಗಿದೆ.

ಪ್ರತಿ ದಿನ ನೂರಾರು ಕೊಲೆ ಪ್ರಕರಣಗಳು ವರದಿ ಆಗುತ್ತವೆ. ಆ ಎಲ್ಲ ಕೇಸ್​ಗಳಿಗೆ ವಿಕಿಪೀಡಿಯಾ ಪುಟ ಇರುವುದಿಲ್ಲ. ಆದರೆ ರೇಣುಕಾ ಸ್ವಾಮಿ ಕೊಲೆಯಲ್ಲಿ ಹೈಪ್ರೊಫೈಲ್​ ವ್ಯಕ್ತಿಗಳ ಹೆಸರು ಕೇಳಿಬಂದಿರುವ ಕಾರಣದಿಂದ ಇದು ಹೆಚ್ಚು ಸುದ್ದಿ ಆಗಿದೆ. ಹೀಗಾಗಿ ‘Murder of Renukaswamy’ ವಿಕಿಪೀಡಿಯಾ ಪೇಜ್​ನಲ್ಲಿ ಮಾಹಿತಿ ನೀಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ನಡೆದ ದಿನಾಂಕ, ಮೃತದೇಹ ಪತ್ತೆ ಆದ ಸ್ಥಳ, ಆತನ ಪತ್ನಿಯ ಹೆಸರು, ಮದುವೆ ಆದ ವರ್ಷ, ತಂದೆ-ತಾಯಿ ಹೆಸರು, ಕೊಲೆಗೆ ಕಾರಣ ಸೇರಿದಂತೆ ಅನೇಕ ವಿವರಗಳನ್ನು ಕಲೆಹಾಕಿ ಈ ವಿಕಿಪೀಡಿಯಾ ಪುಟ ತೆರೆಯಲಾಗಿದೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ ನಂತರ ಏನೆಲ್ಲ ಆಯಿತು? ಕೊಲೆಗೂ ಮೊದಲು ನಡೆದ ಘಟನೆಗಳು ಏನು? ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆಯಲ್ಲಿ ಇರುವ ವಿವರಗಳೇನು ಎಂಬುದನ್ನು ಈ ಪುಟದಲ್ಲಿ ಬರೆಯಲಾಗಿದೆ.

Related Articles

Latest Articles