Friday, June 27, 2025

KTM ಬೈಕ್‌ನಲ್ಲಿ ತಾತನ ಜಾಲಿ ರೈಡ್‌..! ವಿಡಿಯೋ ವೈರಲ್

ಕೆಟಿಎಂ ಬೈಕ್ ಅಂದ್ರೆ ಕೇಳಬೇಕೇ? ಅದ್ರಲ್ಲೂ ಈ 5G ದುನಿಯಾದಲ್ಲಿ ಹುಡುಗ್ರು ಈ ಬೈಕ್‌ನಲ್ಲಿ ಕೂತು ಹುಡುಗೀರ ಮುಂದೆ ನಿಂತ್ರೆ ಆಕರ್ಷಣೆಯಾಗೋದು ಪಕ್ಕಾ. ಈ ಬೈಕ್‌ನಲ್ಲಿ ಯುವಕರು ಸ್ಟೈಲ್‌ ಆಗಿ ಜಾಲಿ ರೈಡ್‌ ಹೋಗುತ್ತಿರುತ್ತಾರೆ. ಸಾಮಾನ್ಯವಾಗಿ ಕೆಟಿಎಂ ಸೇರಿದಂತೆ ಇನ್ನಿತರೆ ಹೊಸ ಮಾಡೆಲ್‌ ಬೈಕ್‌ಗಳ ಸೀಟ್‌ ಸ್ವಲ್ಪ ಎತ್ತರವಾಗಿರುವುದರಿಂದ ಹಿರಿ ಜೀವಗಳು ಅಷ್ಟಾಗಿ ಇಂತಹ ಬೈಕ್‌ಗಳಲ್ಲಿ ಕೂರಲು ಇಷ್ಟಪಡುವುದಿಲ್ಲ.

ಆದ್ರೆ ಇಲ್ಲೊಬ್ಬರು ತಾತ, ತನ್ನ ಮಡದಿಯನ್ನು ಕೂರಿಸಿಕೊಂಡು ಜಾಲಿ ರೈಡ್ ಹೋಗುವ ದೃಶ್ಯ ಸೆರೆಯಾಗಿದೆ. ಯುವಕರು ಮಾತ್ರವೇ ಕೆಟಿಎಂ ಬೈಕ್‌ ಓಡಿಸೋದಾ, ನಾನು ಕೂಡಾ ಯಾರಿಗೂ ಕಮ್ಮಿಯಿಲ್ಲ ಎನ್ನುತ್ತಾ ಕೆಟಿಎಂ ಆರ್‌.ಸಿ 390 ಬೈಕ್‌ನಲ್ಲಿ ತಮ್ಮ ಪತ್ನಿಯನ್ನು ಕೂರಿಸಿಕೊಂಡು ಜಾಲಿ ರೈಡ್‌ ಹೋಗಿದ್ದಾರೆ. ತಾತನ ಈ ಜಬರ್ದಸ್ತ್ ಬೈಕ್‌ ರೈಡಿಂಗ್‌ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ತಮಿಳುನಾಡು ಮೂಲದ ವೃದ್ಧ ದಂಪತಿ ಕೆಟಿಎಂ ಆರ್‌ಸಿ 390 ಬೈಕ್‌ನಲ್ಲಿ ಜಾಲಿ ರೈಡ್‌ ಹೊರಟಿದ್ದು, ಈ ಕುರಿತ ಇಂಟರೆಸ್ಟಿಂಗ್‌ ವಿಡಿಯೋವೊಂದನ್ನು rancibridalmakeup ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಬಿದ್ದ ಮುದ್ದಾದ ಜೋಡಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

https://www.instagram.com/reel/C8J8fNkyFx9/?utm_source=ig_web_copy_link

ವೈರಲ್‌ ವಿಡಿಯೋದಲ್ಲಿ ಬಿಳಿ ಪಂಚೆ ಅಂಗಿ, ಹಸಿರು ಶಾಲು ತೊಟ್ಟು, ಹಿಂಬದಿಯಲ್ಲಿ ಪತ್ನಿಯನ್ನು ಕೂರಿಸಿಕೊಂಡು ತಾತಪ್ಪ ಸ್ಟೈಲಿಶ್‌ ಆಗಿ ಬೈಕ್‌ ಓಡಿಸುತ್ತಿರುವಂತಹ ಸುಂದರ ದೃಶ್ಯವನ್ನು ಕಾಣಬಹುದು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರರು ಇವರ ವಿಡಿಯೋ ಮಾಡಿದಾಗ ಈ ಹಿರಿಯ ಜೋಡಿ ನಾಚಿ ನೀರಾಗಿದ್ದಾರೆ.

Related Articles

Latest Articles