ಆಯಿಲ್ ಟ್ಯಾಂಕ್ ಯುವತಿಯನ್ನು ಕೂರಿಸಿ ಬೈಕ್ ಸವಾರಿ ಮಾಡುತ್ತಿರುವ ಯುವಕನನ್ನು ಹೆಬ್ಬಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಅವರ ಚಾಲನಾ ಪರವಾನಗಿಯನ್ನು ರದ್ದುಪಡಿಸುವಂತೆ ಪೊಲೀಸರು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ ಟಿಒ) ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಕಾವಲ್ ಬೈರಸಂದ್ರ ನಿವಾಸಿ ಸಿಲಂಬರಸನ್ ಎಂಬವರು ಯಲಹಂಕದಿಂದ ಹೆಬ್ಬಾಳದ ಕಡೆಗೆ ಕೊಡಿಗೆಹಳ್ಳಿಯ ಬಳ್ಳಾರಿ ರಸ್ತೆ ಫ್ಲೈಓವರ್ ನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ತಮ್ಮ ತೊಡೆ ಮೇಲೆ ಯುವತಿಯನ್ನು ಕೂರಿಸಿಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು ವೀಡಿಯೊ ವೈರಲ್ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರು ಪೊಲೀಸರ ತನಿಖಾಧಿಕಾರಿಗಳು ವೀಡಿಯೊವನ್ನು ಪರಿಶೀಲಿಸಿದರು, ವಾಹನವನ್ನು ಪತ್ತೆಹಚ್ಚಿ ಆತನನ್ನು ಬಂಧಿಸಿದ್ದಾರೆ.
ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 (ರಾಶ್ ಡ್ರೈವಿಂಗ್ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಸವಾರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.