2028ರಲ್ಲಿ ಅಮೆರಿಕದ ಲಾಸ್ ಏಂಜಲಿಸ್ನಲ್ಲಿ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ಗೆ ಟಿ20 ಕ್ರಿಕೆಟ್ ಆಟ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಲಾಸ್ ಏಂಜಲಿಸ್ ಒಲಿಂಪಿಕ್ಸ್ ಸಂಟನಾ ಸಮಿತಿ, ಈಗಾಗಲೆ ಕ್ರಿಕೆಟ್ ಜತೆಗೆ ಫ್ಲ್ಯಾಗ್ ಫುಟ್ಬಾಲ್, ಬೇಸ್ಬಾಲ್ ಮತ್ತು ಸಾಫ್ಟ್ಬಾಲ್ ಕ್ರೀಡೆಗಳನ್ನು ಹೊಸದಾಗಿ ಒಲಿಂಪಿಕ್ಸ್ಗೆ ಸೇರ್ಪಡೆಗೊಳಿಸಲು ಈಗಾಗಲೆ ನಿರ್ಧರಿಸಲಾಗಿದೆ. 24 ಗಂಟೆಗಳಲ್ಲಿ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದು ಬ್ರಿಟನ್ನ ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.
ಆಯೋಗವು ಮುಂದಿನ ಭಾನುವಾರದಿಂದ ಮುಂಬೈನಲ್ಲಿ ನಡೆಯಲಿರುವ 141ನೇ ಐಒಸಿ ಸಭೆಯಲ್ಲೂ ಈ ವಿಷಯವನ್ನು ತಿಳಿಸಲಿದೆ ಎನ್ನಲಾಗಿದೆ. ಕ್ರಿಕೆಟ್ ಈ ಮುನ್ನ 1990ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಸ್ಪರ್ಧೆಯಾಗಿತ್ತು ಮತ್ತು ಆಗ ಇಂಗ್ಲೆಂಡ್-ಫ್ರಾನ್ಸ್ ಪುರುಷರ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿತ್ತು. ಆದರೆ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಮತ್ತು ಮಹಿಳೆಯರ ಟಿ20 ಕ್ರಿಕೆಟ್ ವಿಭಾಗದಲ್ಲಿ ಹಲವು ತಂಡಗಳು ಭಾಗವಹಿಸಲಿವೆ.
- ಟೆಸ್ಟ್ ಕ್ರಿಕೆಟ್ಗೆ ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಣೆ; ಕಾರಣವೇನು?
- ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರೀ ಏರಿಳಿತ.! ಪ್ಲೇ-ಆಫ್ಗಾಗಿ ಭಾರೀ ಪೈಪೋಟಿ
- ಕಾಂತಾರ ಶೈಲಿಯಲ್ಲೇ ಕೆಎಲ್ ರಾಹುಲ್ ಕಾಲೆಳೆದ ಕೊಹ್ಲಿ.. ಹೃದಯ ಗೆದ್ದ ಇಬ್ಬರ ಆತ್ಮೀಯತೆ
- ನೀರಜ್ ಚೋಪ್ರಾ ಮತ್ತೆ ಪರಾಕ್ರಮ – ಭರ್ಜರಿ ಚಿನ್ನದ ಬೇಟೆ..! ತನ್ನದೇ ದಾಖಲೆ ಮುರಿದ ಬಂಗಾರದ ಯುವಕ
- TATA IPL 2025: ಕೊನೆಗೂ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್..!
ಕ್ರಿಕೆಟ್ ಹೆಚ್ಚಿನ ಜನಪ್ರಿಯತೆ ಹೊಂದಿರುವ ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ ಲಾಸ್ ಏಂಜಲಿಸ್ ಒಲಿಂಪಿಕ್ಸ್ ಆಯೋಜಕರು, ಇದರಿಂದಾಗಿ ನೇರಪ್ರಸಾರ ಹಕ್ಕಿನಿಂದ 1,526 ಕೋಟಿ ರೂ. ಹೆಚ್ಚುವರಿ ಆದಾಯ ಬರುವ ಲೆಕ್ಕಾಚಾರ ಹೊಂದಿದ್ದಾರೆ.