Monday, September 16, 2024

ಸ್ವಾವಲಂಬಿ ಯೋಜನೆ’ಯಡಿಸರಕು ವಾಹನ\ಟ್ಯಾಕ್ಸಿʼ ಖರೀದಿಗೆ 4 ಲಕ್ಷ ರೂ. ಸಹಾಯಧನ

ರಾಜ್ಯದ ನಿರುದ್ಯೋಗಿ ಯುವಕ/ಯುವತಿಯರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದ್ದು, ಸ್ವಾವಲಂಬಿ ಯೋಜನೆ'ಯಡಿಸರಕು ವಾಹನ\ಟ್ಯಾಕ್ಸಿʼ ಖರೀದಿಗೆ ಸಹಾಯಧನ 4 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಬಿ ಸಾರಥಿ ಯೋಜನೆಗಳಡಿ ಸರಕು ವಾಹನ ಅಥವಾ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದೀಗ ಸಹಾಯಧನವನ್ನು 4 ಲಕ್ಷ ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ/ ಯುವತಿಯರಿಗೆ ವಾಣಿಜ್ಯ ಉದ್ದೇಶಕ್ಕಾಗಿ ನಾಲ್ಕು ಚಕ್ರದ ವಾಹನ ಖರೀದಿಗೆ ಸಹಾಯಧನ. 3.50 ಲಕ್ಷ ರೂ.ಗಳ ಸಹಾಯಧನದ ಮೊತ್ತವನ್ನು 2023-24ನೇ ಸಾಲಿನಿಂದ 4.00 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

Related Articles

Latest Articles