Friday, June 27, 2025

ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ; ಸ್ನೇಹಿತೆಯಿಂದ 15 ಲಕ್ಷ ರೂ ಮೌಲ್ಯದ ಚಿನ್ನ ವಸೂಲಿ

ಬೆಂಗಳೂರು: ಪ್ರಿಯಕರನೊಂದಿಗಿನ ಖಾಸಗಿ ಫೋಟೋ, ವಿಡಿಯೋ ವೈರಲ್​ ಮಾಡುವುದಾಗಿ ಬ್ಲ್ಯಾಕ್ ಮೇಲ್​ ಮಾಡಿ ಜ್ಯುವೆಲರಿ ಶಾಪ್ ಮಾಲೀಕನ ಮಗಳಿಂದ ಬರೊಬ್ಬರಿ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆಕೆಯ ಗೆಳೆಯನೇ ವಸೂಲಿ ಮಾಡಿದ್ದಾನೆ. ಸದ್ಯ ಬ್ಲ್ಯಾಕ್ ಮೇಲ್​ ಮಾಡಿದ ಆರ್​ಟಿ ನಗರದ ಅರ್ಪಿತ್​ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಜಯನಗರ ಪೊಲೀಸರು ವಿಚಾರಣೆ ಆರಂಭಿಸಿದ ವೇಳೆ ಅಸಲಿ ಸಂಗತಿ ಬಯಲಾಗಿದೆ. ಯುವತಿ, ಯುವತಿಯ ಪ್ರಿಯಕರ ಹಾಗೂ ಬಂಧಿತ ಸ್ನೇಹಿತ ಅರ್ಪಿತ್, ಎರಡು ವರ್ಷದ ಹಿಂದೆ ಒಂದೇ ಕಾಲೇಜಿನಲ್ಲಿ ಒಟ್ಟಿಗೆ ​​ವ್ಯಾಸಂಗ ಮಾಡಿದ್ದರು. ಈ ವೇಳೆ ಯುವತಿ ಹಾಗೂ ಪ್ರಿಯಕರ ಒಟ್ಟಿಗೆ ಇದ್ದ ಖಾಸಗಿ ವಿಡಿಯೋಗಳನ್ನು ಬಂಧಿತ ಅರ್ಪಿತ್​ ರೆಕಾರ್ಡ್‌ ಮಾಡಿಟ್ಟುಕೊಂಡಿದ್ದಾನೆ.

ಪಿಯುಸಿ ಡ್ರಾಪ್ ಔಟ್ ಆದ ಬಳಿಕ ಇದೇ ವಿಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಯುವತಿಗೆ ಬ್ಲ್ಯಾಕ್ ಮೇಲ್​ ಮಾಡಿದ್ದಾನೆ. ಬೆದರಿಕೆಗೆ ಹೆದರಿದ ಯುವತಿ ಮನೆಯಲ್ಲಿದ್ದ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆತನಿಗೆ ನೀಡಿದ್ದಳು.

ಇತ್ತ ಮನೆಯಲ್ಲಿದ್ದ 268 ಗ್ರಾಂ ಚಿನ್ನಾಭರಣ ಕಾಣದ ಹಿನ್ನಲೆ ಜ್ಯುವೆಲರಿ ಮಾಲೀಕ ಹುಡುಕಾಡಿದ್ದಾರೆ. ಈ ವೇಳೆ ತನ್ನ ಗೆಳೆಯನಿಗೆ ಕೊಟ್ಟಿದ್ದಾಗಿ ಮಗಳು ಹೇಳಿದ್ದಾರೆ. ಮುಂಬೈನಿಂದ ಓದಲು ಬಂದಿದ್ದ. ಓದು ಮುಗಿದ ಬಳಿಕ ಚಿನ್ನದ ಸಮೇತ ಮುಂಬೈ ಹೊಗಿದ್ದಾನೆ ಎಂದು ಹೇಳಿದ್ದಾಳೆ. ಆ ಬಳಿಕ ಪೊಷಕರಿಂದ ಜಯನಗರ ಠಾಣೆಗೆ ದೂರು ನೀಡಲಾಗಿದೆ.

ಆರೋಪಿಯನ್ನು ಬಂಧನ ಮಾಡಿ, ಮಾರಾಟ ಮಾಡಿದ್ದ ಅಂಗಡಿಗಳ ಪತ್ತೆ ಹಚ್ಚಿ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಜಯನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.

Related Articles

Latest Articles