ಪ್ರಪಂಚದ ಅತೀ ವಿರಳ ಮೀನು ಕಾಣಿಸಿಕೊಂಡಿದ್ದು ಜನರಲ್ಲಿ ಪ್ರಕೃತಿ ವಿಕೋಪದಿಂದ ಅನಾಹುತ ಆಗುತ್ತದೆ ಎಂಬ ಆತಂಕ ಶುರುವಾಗಿದೆ. ತನ್ನ ವಿಶೇಷ ಆಕಾರ, ದೊಡ್ಡ ಕಣ್ಣು, ತಲೆ ಮೇಲಿನ ಜುಟ್ಟಿನಿಂದಾಗಿ ವಿಚಿತ್ರವಾಗಿ ಕಾಣುವ ಇದನ್ನು ಡೂಮ್ಸ್‌ಡೇ ಅಥವಾ ಓರ್ಫಿಶ್ ಎಂದು ಕರೆಯುತ್ತಾರೆ.
ಕೆಲವೆಡೆ ಅದನ್ನು ದೇವರ ಮೀನು ಅಂತಾನೂ ಕರೆಯುತ್ತಾರೆ. ಅದು ಕಾಣಿಸಿಕೊಂಡರೆ ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿ ವಿನಾಶಗಳು ಆಗುತ್ತವೆ ಎನ್ನುತ್ತಾರೆ. ಇದೀಗ ಸಮುದ್ರ ತೀರದಲ್ಲಿ ಇದರ ಮೃತದೇಹ ಪತ್ತೆಯಾಗಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಈ ಡೂಮ್ಸ್ ಡೇಮೀನು ಕಳೆದ ವಾರ ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸತ್ತ ರೀತಿಯಲ್ಲಿ ಪತ್ತೆಯಾಗಿದೆ. ಇದನ್ನು ನೋಡೋಕೆ ಸುತ್ತಮುತ್ತಲಿನ ಜನರು ಬರುತ್ತಿದ್ದಾರೆ
ಇದನ್ನು ಹಲವೆಡೆ ಇದನ್ನು ದೇವರ ಮೀನು ಅಂತಾನೂ ಕರೆಯುತ್ತಾರೆ. ಮೀನು ಅಸಾಧಾರಣವಾಗಿ ದೊಡ್ಡ ಕಣ್ಣುಗಳು ಮತ್ತು ಅದರ ತಲೆಯ ಮೇಲೆ ಕೆಂಪು ಸ್ಪೈನ್ಗಳನ್ನು ಹೊಂದಿದೆ. 30 ಅಡಿ ಬೆಳೆಯುವ 12 ಅಡಿ ಮೀನು ಅಪರೂಪದ ಮೀನಾಗಿದೆ. ಸಾಮಾನ್ಯವಾಗಿ ಈ ಮೀನು ಪ್ರಭೇದಗಳು ಆಳ ಸಮುದ್ರದಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ಮಾತ್ರ ಮೇಲಕ್ಕೆ ಕಾಣಿಸಿಕೊಳ್ಳುತ್ತವೆ.
ಈ ಮೀನುಗಳು ಕಾಣಿಸಿಕೊಂಡರೆ ಪ್ರಪಂಚದ ವಿನಾಶ ಶುರು ಅಂತಲೂ ಹೇಳಲಾಗುತ್ತದೆ. ಭೀಕರ ಭೂಕಂಪಗಳ ಮೊದಲು ಈ ಮೀನುಗಳು ಕೊಚ್ಚಿಕೊಂಡು ಹೋಗಿರುವುದು ಕಂಡುಬಂದಿದೆ. ಜಪಾನ್‌ನಲ್ಲಿ 2011ರ ಭೂಕಂಪದ ಮೊದಲು 20 ಓರ್ಫಿಶ್ ಸಮುದ್ರ ತೀರದಲ್ಲಿ ಕಂಡುಬಂದಿತ್ತು.