ಕಿರುತೆರೆ ಲೋಕದಲ್ಲಿ ಹೊಸ ರೀತಿಯ ಪ್ರಯೋಗ ಮಾಡಿದ್ದ ಹಿಟ್ಲರ್ ಕಲ್ಯಾಣ ಹಾಗೂ ಪಾರು ಧಾರಾವಾಹಿ ಶುಭಂ ಹೇಳ್ತಿವೆ. ಎರಡೂ ಸೀರಿಯಲ್ಗಳ ನಟ ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ ಧೃತಿ ಕ್ರಿಯೇಷನ್ಸ್ನಡಿ ನಿರ್ಮಾಣ ಮಾಡಿದ್ದರು. ಈಗ ಒಟ್ಟಿಗೆ ಅಂತಿಮ ಸಂಚಿಕೆಗಳಿಗೆ ತಯಾರಾಗಿರೋದು ಕೆಲ ವೀಕ್ಷಕರಿಗೆ ಬೇಸರ ತರಿಸಿದೆ.

ಈ ಬಗ್ಗೆ ಝೀ ಕನ್ನಡ ಅಧೀಕೃತ ಪೇಜ್‌ನಲ್ಲಿ ಅಂತಿಮ ಸಂಚಿಕೆ ಎಂದು ಪೋಸ್ಟ್ ಮಾಡಿದೆ. 700ಕ್ಕೂ ಹೆಚ್ಚು ಸಂಚಿಕೆಗಳನ್ನ ಪೂರೈಸಿರೋ ಹಿಟ್ಲರ್ ಕಲ್ಯಾಣ ಟಾಪ್ ಧಾರಾವಾಹಿಗಳ ಲಿಸ್ಟ್ನಲ್ಲಿ ಸ್ಥಾನ ಪಡೆದಿದೆ. ಮೂವರು ಸೊಸೆಯಂದಿರಿಗೆ ಅತ್ತೆ ಆಗಿರೋ ಲೀಲಾ ಹೇಗೆ ಬದುಕಿನ ಸವಾಲುಗಳನ್ನ ಎದರುಸುತ್ತಾಳೆ ಎಂಬ ಎಳೆಯೊಂದಿಗೆ ಶುರುವಾದ ಕಥೆ ಅದ್ಧೂರಿಯಾಗಿ ಮನರಂಜನೆ ನೀಡಿದೆ.

ಇನ್ನೂ ಹಲವು ತಿರುವುಗಳನ್ನ ಪಡೆದುಕೊಂಡು ಬಂದ ಕಥೆ ನಟ, ನಿರ್ಮಾಪಕ ದಿಲೀಪ್ ರಾಜ್ ಅವರನ್ನ ವಿಭಿನ್ನ ರೂಪದಲ್ಲಿ ನೋಡೋ ಅವಕಾಶ ಕಲ್ಪಿಸಿಕೊಟ್ಟಿತು. ದಾವಣಗೆರೆಯ ಪ್ರತಿಭೆ ನಟಿ ಮಲೈಕಾ ವಸುಪಾಲ್ ಅವರನ್ನ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದಂತೆ ಆಗಿದೆ. ಹಲವು ಕಲಾವಿದರಿಗೆ ಹಿಟ್ಲರ್ ಕಲ್ಯಾಣ ಸೀರಿಯಲ್ ಬ್ರೇಕ್ ನೀಡಿದೆ.

ಇನ್ನು ಪಾರು ಧಾರಾವಾಹಿ 1,300ಕ್ಕೂ ಹೆಚ್ಚು ಸಂಚಿಕೆಗಳನ್ನ ಪೂರೈಸಿ ಮನರಂಜನೆ ನೀಡ್ತಾ ಬಂದಿದೆ. ಹಿರಿಯ ನಟಿ ವಿನಯಾ ಪ್ರಸಾದ್ ಅವರ ಅದ್ಭುತ ನಟನೆ ಕಥೆಗೆ ಹೊಸ ಅರ್ಥ ಕಲ್ಪಿಸಿದ್ದು ಸುಳ್ಳಲ್ಲ. ಹೊಸ ಪ್ರತಿಭೆಗಳಾದ ನಟಿ ಮೋಕ್ಷಿತಾ, ಪವಿತ್ರಾ ನಾಯಕ್, ಮಾನ್ಸಿ ಜೋಶಿ, ಖುಷಿ ಶಿವು, ನೆಗೆಟಿವ್ ಶೇಡ್ನಲ್ಲಿ ಸಿತಾರಾ, ನಾಯಕರಾದ ಶರತ್, ಸಿದ್ದು ಮೂಲಿಮನಿ ಸೇರಿದಂತೆ ಸಾಕಷ್ಟು ಕಲಾವಿದರಿಗೆ ಬ್ರೇಕ್ ನೀಡಿದೆ. ಸದ್ಯಕ್ಕೆ ಪಾರು ಧಾರಾವಾಹಿ ಮುಕ್ತಾಯದ ಹಂತದಲ್ಲಿದೆ. ಇದೇ ತಿಂಗಳು ಹೊಸ ಧಾರಾವಾಹಿಗಳು ಲಾಂಚ್ ಆಗ್ತಿದ್ದು, ಪಾರು-ಹಿಟ್ಲರ್ ಇನ್ಮುಂದೆ ನೆನಪಷ್ಟೇ ಆಗಲಿವೆ.
