22 ವರ್ಷದ ಸಂಗೀತಗಾರ 5 ಮಹಿಳೆಯರನ್ನು ಗರ್ಭಿಣಿ ಮಾಡಿದ್ದಲ್ಲದೆ ಅವರ ಜೊತೆಗೆ ಬೇಬಿ ಶವರ್ ಫೋಟೋಶೂಟ್ ಮಾಡಿಸಿದ್ದಾನೆ. ಈಗ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಝೆಡ್ಡಿ ವಿಲ್ (Zeddy Will) ಖ್ಯಾತ ಸಂಗೀತಗಾರನಾಗಿದ್ದು, 22 ವರ್ಷದ ಈತ ನ್ಯೂಯಾರ್ಕ್ ನಗರದಲ್ಲಿ ತನ್ನ ಐದು ಗರ್ಭಿಣಿರೊಂದಿಗೆ ಬೇಬಿ ಶವರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾನೆ. ಈ ಫೋಟೋವನ್ನು ಲಿಜ್ಜಿ ಆಶ್ಲೀಗ್ ಎಂಬಾಕೆ ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಾಳೆ.
29 ವರ್ಷದ ಆಶ್ಲೀಗ್ ಜನವರಿ 14ರಂದು ಬೇಬಿ ಶವರ್ ಆಯೋಜಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡು ಅನೇಕರು ಕಾಮೆಂಟ್ ಬರೆದಿದ್ದಾರೆ. ಅದರಲ್ಲೊಬ್ಬರು ‘ಸ್ವಾಗತ ಪುಟ್ಟ ಜೆಡ್ಡಿ ವಿಲ್ಸ್1-5’ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ಸಹ ಹರಿದಾಡುತ್ತಿವೆ. ಟಿಕ್ ಟಾಕ್ ಬಳೆದಾರರಂತು ಈ ಫೋಟೋ ನೋಡಿ ಅಚ್ಚರಿಗೊಂಡಿದ್ದಾರೆ.
https://www.instagram.com/reel/C2OA29rL_b7/?igsh=MTk5MzNzMzlxem4zaA==