Sunday, November 3, 2024

ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಯುವಕ ಜೀವಾಂತ್ಯ

ಚಿಕ್ಕೋಡಿ: ಮದುವೆಯಾಗಲು ಯುವತಿ ಸಿಗದ ಹಿನ್ನಲೆ ದುಃಖಿತನಾದ ಯುವಕ ನೇಣಿಗೆ ಶರಣಾದ ಘಟನೆ ಹುಕ್ಕೇರಿಯಲ್ಲಿ ನಡೆದಿದೆ.

ಶಾಂತಿನಾಥ ಸುರೇಶ್ ಕೇಸ್ತಿ (27) ಆತ್ಮಹತ್ಯೆಗೆ ಶರಣಾದ ಯುವಕ. ಯುವಕ ನಗರದಲ್ಲಿ ಬೈಕ್ ಗ್ಯಾರೇಜ್ ನಡೆಸುತ್ತಿದ್ದ. ಅತಿಯಾದ ಸಾಲ ಹಾಗೂ ಮದುವೆಗೆ ಹೆಣ್ಣು ಸಿಗದೆ ನೊಂದಿದ್ದ. ಇದೇ ಕಾರಣಕ್ಕೆ ಗ್ಯಾರೇಜ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Latest Articles