ದ.ಕ: ನದಿಯಲ್ಲಿ ಈಜಾಡುತ್ತಿರುವಾಗಲೇ ಯುವಕನೊಬ್ಬ ಹೃದಯಾಘಾತ ಹೊಂದಿ ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮೃತ ಪುತ್ತೂರಿನ ದೇವಸ್ಯ ನಿವಾಸಿ ಸುಜಿತ್ (27) ಎಂದು ಗುರುತಿಸಲಾಗಿದೆ. ಸುಜಿತ್ ರವರು ಬೆಂದ್ರ್ ತೀರ್ಥದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿರುವ ನದಿಯೊಂದಕ್ಕೆ ಈಜಾಡಲು ತೆರಳಿದ್ದರು.
ಈಜಾಡುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪಿದ್ದಾರೆ. ಸುಜಿತ್ ಪುತ್ತೂರು ಬೊಳುವಾರಿನಲ್ಲಿ ಗ್ಯಾರೇಜ್ ವೊಂದರಲ್ಲಿ ಕೆಲಸಮಾಡುತ್ತಿದ್ದರು. ದೀಪಾವಳಿಯ ಪ್ರಯುಕ್ತ ಸಂಬಂಧಿಕರ ಮನೆಗೆ ಹೋಗಿದ್ದರೆಂದು ತಿಳಿದು ಬಂದಿದೆ.