Sunday, November 3, 2024

ಅಜ್ಜಿಯ ಕೈಯಲ್ಲಿದ್ದ ಒಂಭತ್ತು ತಿಂಗಳ ಮಗುವಿನ ಅಪಹರಣಕ್ಕೆ ಯತ್ನ – ಅನ್ಯರಾಜ್ಯ ಕಾರ್ಮಿಕನ ಬಂಧನ

ಅಜ್ಜಿಯ ಕೈಯಲ್ಲಿದ್ದ ಒಂಬತ್ತು ತಿಂಗಳ ಮಗುವನ್ನು ಅಪಹರಿಸಲು ಯತ್ನಿಸಿದ ಕಾರ್ಮಿಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತಿರುವನಂತಪುರಂನಲ್ಲಿ ನಡೆದಿದೆ

ಅನ್ಯರಾಜ್ಯದ ಕಾರ್ಮಿಕ ತಿರುವನಂತಪುರದ ಕಜಕೂಟದಲ್ಲಿ ಮಗುವನ್ನು ಅಪಹರಣ ಮಾಡಲು ಯತ್ನಿಸಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಅಸ್ಸಾಂ ಮೂಲದ ನೂರುಲ್ ಆದಂ(47) ಬಂಧಿತ ಆರೋಪಿ.

ಘಟನೆಯಲ್ಲಿ ಅಜ್ಜಿಗೂ ಗಾಯಗಳಾಗಿವೆ. ಸೆ. 16 ರ ರಾತ್ರಿ 7:30ರ ಸುಮಾರಿಗೆ ಕಜಕೂಟಂ ಮೆಡಿಕಲ್ ಸ್ಟೋರ್‌ನಲ್ಲಿ ಔಷಧಿ ಖರೀದಿಸಲು ಹೋದಾಗ ಈ ಘಟನೆ ನಡೆದಿದೆ. ಮಗುವನ್ನು ಹಿಡಿಯಲು ಮುಂದಾದಾಗ ತಡೆದ ಅಜ್ಜಿ ಗಾಯಗೊಂಡಿದ್ದಾರೆ. ಸೆಳೆತದಿಂದ ಮಗುವೂ ಗಾಯಗೊಂಡಿದೆ.

ಘಟನೆಯನ್ನು ಕಂಡ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಮಗು ಹಾಗೂ ಮಗುವಿನ ಅಜ್ಜಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Latest Articles