Sunday, May 18, 2025

ರೈಲ್ವೆ ಹಳಿ ಮೇಲೆ ಗಾಢ ನಿದ್ದೆಗೆ ಜಾರಿದ ಯುವತಿ – ಕಾರಣವೇನು?

ರೈಲಿನಡಿಗೆ ಬಿದ್ದು ಸಾಯಲು ಬಂದಿದ್ದ ಯುವತಿ ಬದುಕಿ ಬಂದಿದ್ದಾಳೆ. ನಿದ್ರಾದೇವಿಯ ಪ್ರಭಾವ, ರೈಲ್ವೇ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪಾರಾದ ಅಚ್ಚರಿಯ ಘಟನೆ ವರದಿಯಾಗಿದೆ. ಈ ಘಟನೆ ಬಿಹಾರದ ಮೋತಿಹಾರಿಯ ಚಾಕಿಯಾ ರೈಲು ನಿಲ್ದಾಣದ ಬಳಿ ನಡೆದಿದೆ.

ಸಾಯುವ ಉದ್ದೇಶದಿಂದ ಯುವತಿಯೊಬ್ಬಳು ರೈಲಿನ ಹಳಿ ಮೇಲೆ ಮಲಗಿಕೊಂಡಿದ್ದಳು. ಆದರೆ ಇದೇ ವೇಳೆ ನಿದ್ದೆ ಬಂದು ಬಿಟ್ಟಿದೆ. ರೈಲಿಗಾಗಿ ಕಾದು ಕಾದು ಸುಸ್ತಾಗಿ ಯುವತಿ ಗಾಢ ನಿದ್ದೆಗೆ ಜಾರಿದ್ದಾಳೆ.

ಹಳಿಗಳ ಮೇಲೆ ನಿದ್ದೆಗೆಟ್ಟು ಮಲಗಿಕೊಂಡಿದ್ದ ಯುವತಿಯನ್ನು ನೋಡಿದ ಚಾಲಕ ಏಕಾಏಕಿ ರೈಲನ್ನು ನಿಲ್ಲಿಸಿದ್ದಾರೆ. ಆ ಕೂಡಲೇ ರೈಲಿನಿಂದ ಕೆಳಗೆ ಇಳಿದು ಯುವತಿಯನ್ನು ಎಬ್ಬಿಸಿದ್ದಾರೆ.

ಆದರೆ ಗಾಢವಾದ ನಿದ್ದೆಯಲ್ಲಿ ಇದ್ದಿದ್ದ ಯುವತಿಗೆ ಸ್ವಲ್ಪ ಸಮಯದ ಬಳಿಕ ಎಚ್ಚರವಾಗಿದೆ. ಬಳಿಕ ರೈಲು ಸಿಬ್ಬಂದಿ ನಿನಗೆ ಸಾಯುವಂತದ್ದು ಏನಾಗಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಯಾವುದಕ್ಕೂ ಉತ್ತರ ಕೊಡದ ಯುವತಿ ಹಾಗೇ ಕುಳಿತುಕೊಂಡಿದ್ದಾಳೆ. ಇದಾದ ಬಳಿಕ ಯುವತಿಯನ್ನು ಅಲ್ಲೇ ನಿಂತುಕೊಂಡಿದ್ದ ಮಹಿಳೆಯರು ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Related Articles

Latest Articles