ಕಂಪ್ಯೂಟರ್‌ಗಳ ಆಪರೇಟಿಂಗ್ ಸಿಸ್ಟಮ್ ದಿಗ್ಗಜ ಮೈಕ್ರೋಸಾಫ್ಟ್ ವಿಂಡೋಸ್ ವಿಶ್ವಾದ್ಯಂತ ಹಲವೆಡೆ ಸ್ಥಗಿತಗೊಂಡಿದೆ. ವಿಂಡೋಸ್ ಬಳಕೆದಾರರಿಗೆ ತಮ್ಮ ಕಂಪ್ಯೂಟರ್ ಪರದೆಯ ಮೇಲೆ ನೀಲಿ ಬಣ್ಣದ ಮೃತ್ಯು ಚಿಹ್ನೆ ( ಬ್ಲೂ ಸ್ಕ್ರೀನ್ ಆಫ್ ಡೆತ್ – BSOD) ಕಾಣಿಸಲಾರಂಭಿಸಿದೆ.
ಜಾಗತಿಕವಾಗಿ ಕಂಡುಬಂದಿರುವ ಈ ಸಮಸ್ಯೆ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥೆ ಸ್ಪಷ್ಟೀಕರಣ ನೀಡಿದ್ದು, ಇತ್ತೀಚಿಗೆ ಮೈಕ್ರೋಸಾಫ್ಟ್ ಮಾಡಿದ ಕ್ರೌಡ್ ಸ್ಟ್ರೈಕ್ ಸಿಸ್ಟಮ್ ಅಪ್‌ಡೇಟ್‌ನಿಂದ ಈ ಸಮಸ್ಯೆ ಉಂಟಾಗಿದೆಯೆಂದು ಒಪ್ಪಿಕೊಂಡಿದೆ. ತ್ವರಿತ ಗತಿಯಲ್ಲಿ ತಾಂತ್ರಿಕ ದುರಸ್ಥಿ ನಡೆಯುತ್ತಿದ್ದು ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಹೀಗೆ ಸಮಸ್ಯೆ ಕಂಡು ಬಂದು ಕೆಲಕಾಲ ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಂಡು ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸಿದೆ.

ಕ್ರೌಡ್ ಸ್ಟ್ರೈಕ್ ಸಿಸ್ಟಮ್ ಮೈಕ್ರೋಸಾಫ್ಟ್ ನ ಇತ್ತೀಚಿನ ಅಪ್‌ಡೇಟ್ ಆಗಿದ್ದು, ಸೈಬರ್ ಸುರಕ್ಷಿತಿ ಸಾಧನವಾಗಿ ವಿಂಡೋಸ್ ಬಳಕೆದಾರಿಗಾಗಿ ಅಭಿವೃದ್ಧಿಪಡಿಸಲಾಗಿತ್ತು.
ಏಕಾಏಕಿ ಈ ರೀತಿಯಾಗಿದ್ದು ಹಲವಾರು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ವಿಶ್ವಾದ್ಯಂತ ಲಕ್ಷಾಂತರ ಮಂದಿಯ ಕಂಪ್ಯೂಟರ್ಗಳನ್ನು ಇದು ಬಾಧಿಸಿದೆ. ಬ್ಯಾಂಕುಗಳು, ನ್ಯೂಸ್ ಚಾನಲ್ಗಳು, ಷೇರು ವಿನಿಮಯ ಕೇಂದ್ರ ಹೀಗೆ ಬಹಳಷ್ಟು ಸೇವೆಗಳು ಸ್ಥಗಿತಗೊಂಡ ಬಗ್ಗೆ ವರದಿಯಾಗಿದೆ. ವಿಮಾನ ಹಾರಾಟ ಕಾರ್ಯಾಚರಣೆ ಮೇಲೂ ಇದು ಪರಿಣಾಮ ಬೀರಿದೆ.
ಈ ಬೆಳವಣಿಗೆ ಬಗ್ಗೆ ಭಾರತದ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೈಕ್ರೋಸಾಫ್ಟ್ ಹಾಗೂ ಅದರ ಸಹಸಂಸ್ಥೆಗಳ ಜೊತೆ ತಮ್ಮ ಸಚಿವಾಲಯ ಸಂಪರ್ಕದಲ್ಲಿದೆ. ಈ ಜಾಗತಿಕ ತಾಂತ್ರಿಕ ದೋಷಕ್ಕೆ ಕಾರಣ ಏನೆಂದು ಗುರುತಿಸಲಾಗಿದೆ. ಸಮಸ್ಯೆ ಬಗೆಹರಿಸಲು ಅಪ್ಡೇಟ್ಗಳನ್ನು ಮೈಕ್ರೋಸಾಫ್ಟ್ ಬಿಡುಗಡೆ ಮಾಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ಸಿಇಆರ್ಟಿಯಿಂದ ಈ ಸಂಬಂಧ ಟೆಕ್ನಿಕಲ್ ಅಡ್ವೈಸರಿ ಹೊರಡಿಸಲಾಗುವುದು ಎಂದಿದ್ದಾರೆ. ಹಾಗೆಯೇ, ಸರ್ಕಾರದ ಎನ್ಐಸಿ ನೆಟ್ವರ್ಕ್ಗೆ ಈ ಮೈಕ್ರೋಸಾಫ್ಟ್ ಔಟೇಜ್ ಸಮಸ್ಯೆ ಬಾಧಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
=============
Windows users around the globe have been stuck in ‘recovery’ stage after a massive outage after a recent Crowdstrike update. Reports suggest that the outage has affected Airports, companies and government offices across the world.