Friday, July 19, 2024

ಪ್ಲೇ ಆಫ್​ಗೆ ಮುನ್ನವೇ ಆರ್​​ಸಿಬಿ ತಂಡದಿಂದ ಸ್ಟಾರ್​ ಪ್ಲೇಯರ್ ಹೊರಕ್ಕೆ..! ಕಾರಣವೇನು? ​​

ಐಪಿಎಲ್‌ 17ನೇ ಸೀಸನ್​​ ಮುಕ್ತಾಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್​ ಶಾಕ್​ ಎದುರಾಗಿದೆ. ಪ್ಲೇ ಆಫ್​​ ಓಟದಲ್ಲಿರುವ ಬೆಂಗಳೂರು ಟೀಮ್‌ಗೆ ಇಂಗ್ಲೆಂಡ್​ ಆಟಗಾರರು ಆಘಾತ ನೀಡಿದ್ದಾರೆ. ಆರ್​​​ಸಿಬಿ ತಂಡಕ್ಕೆ ಕೈ ಕೊಟ್ಟು ದೇಶಕ್ಕಾಗಿ ಆಡಲು ವಿಲ್ ಜಾಕ್ಸ್​​ (Will Jacks) ಹಾಗೂ ರೀಸ್ ಟೋಪ್ಲಿ (Reece Topley) ಇಂಗ್ಲೆಂಡ್​ಗೆ ತೆರಳಿದ್ದಾಗಿ ತಿಳಿದುಬಂದಿದೆ.

ಕಳೆದ 8 ಪಂದ್ಯಗಳಲ್ಲಿ ಆರ್​​​ಸಿಬಿ ತಂಡದ ಪ್ಲೇಯಿಂಗ್​​ ಎಲೆವೆನ್​​ ಭಾಗವಾಗಿ ವಿಲ್​ ಜಾಕ್ಸ್​​ ಇದ್ದರು. ಆರ್​​​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ಸ್ಟಾರ್​ ಆಲ್​ರೌಂಡರ್​​ ವಹಿಸಿದ್ದರು. ಈಗ ವಿಲ್​ ಜಾಕ್ಸ್​​ ಅಲಭ್ಯತೆ ಆರ್​​​ಸಿಬಿ ತಂಡದ ಮೇಲೆ ಪ್ರಭಾವ ಬೀರುವುದಂತೂ ಖಂಡಿತಾ. ಇವರ ಬದಲಿಗೆ ಯಾರನ್ನು ಕಣಕ್ಕಿಳಿಸಬಹುದು ಎಂಬ ಪ್ರಶ್ನೆ ಕಾಡುತ್ತಿದೆ.

ಈ ಪ್ರಶ್ನೆಗೆ ಸದ್ಯದ ಉತ್ತರ ಗ್ಲೆನ್ ಮ್ಯಾಕ್ಸ್​ವೆಲ್. ಕಳಪೆ ಫಾರ್ಮ್​ನಲ್ಲಿರೋ ಕಾರಣ ಮ್ಯಾಕ್ಸ್​ವೆಲ್ ಕಳೆದ ಕೆಲವು ಪಂದ್ಯಗಳಲ್ಲಿ ಆರ್​​ಸಿಬಿ ಪರ ಆಡಲಿಲ್ಲ. ಈಗ ಜಾಕ್ಸ್​ ಅಲಭ್ಯರಾದ ಪರಿಣಾಮ ಮ್ಯಾಕ್ಸ್​ವೆಲ್ ಅವರನ್ನೇ ಆರ್​​ಸಿಬಿಗೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಲ್ ಜ್ಯಾಕ್ಸ್, ರೀಸ್ ಟೋಪ್ಲೆ ಮಾತ್ರವಲ್ಲ ಐಪಿಎಲ್‌ನಲ್ಲಿ ಆಡುತ್ತಿರುವ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಇಂಗ್ಲೆಂಡ್ ಆಟಗಾರರು ತವರಿಗೆ ಮರಳಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಬ್ಯಾಟರ್ ಜೋಸ್ ಬಟ್ಲರ್ ಕೂಡ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಕೆಕೆಆರ್ ತಂಡದಲ್ಲಿರುವ ಫಿಲ್ ಸಾಲ್ಟ್ ಕೂಡ ನಾಳೆ ಇಂಗ್ಲೆಂಡ್‌ಗೆ ಹೊರಡಲಿದ್ದಾರೆ. ಸಿಎಸ್‌ಕೆ ತಂಡದ ಮೊಯೀನ್ ಅಲಿ, ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೈರ್ ಸ್ಟೋ ತಂಡವನ್ನು ತೊರೆಯಲಿದ್ದಾರೆ.

ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವಿರುದ್ಧ ಮ್ಯಾಕ್ಸಿ ಕಣಕ್ಕಿಳಿಯಲಿದ್ದಾರೆ. ಎಂ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ಮ್ಯಾಕ್ಸಿ ಆಡಲೇಬೇಕು. ಈ ಮೂಲಕ ಹಳೆ ಖದರ್​ಗೆ ಮರಳಲೇಬೇಕು ಎಂಬುದು ಎಲ್ಲರ ಆಸೆ.

Related Articles

Latest Articles