Wednesday, February 19, 2025

ಮತ್ತಷ್ಟು ಸುರಕ್ಷತಾ ಫೀಚರ್ಸ್ ಪರಿಚಯಿಸುತ್ತಿದೆ ವಾಟ್ಸಾಪ್..! ಡಿಪಿ ಸ್ಕ್ರೀನ್‌ಶಾಟ್ ತೆಗೆಯಲು ಇನ್ನು ಮುಂದೆ ಸಾಧ್ಯವಿಲ್ಲ

ವ್ಯಾಟ್ಸ್ಆ್ಯಪ್ ಸುರಕ್ಷತಾ ಫೀಚರ್ಸ್ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಡೆಯಲು ವ್ಯಾಟ್ಸ್ಆ್ಯಪ್ ಇದೀಗ ಹೊಸ ಫೀಚರ್ ಪರಿಚಯಿಸುತ್ತಿದೆ.

ವ್ಯಾಟ್ಸ್ಆ್ಯಪ್ ಹೊಸ ಪ್ರೈವೈಸಿ ಫೀಚರ್ ಪರಿಚಯಿಸುತ್ತಿದೆ. ಈ ಹೊಸ ಫೀಚರ್ ನಿಮ್ಮ ವ್ಯಾಟ್ಸ್ಆ್ಯಪ್ ಪ್ರೊಫೈಲ್‌ಗೂ ರಕ್ಷಣೆ ನೀಡಲಿದೆ. ಹೌದು, ಇನ್ನು ಮುಂದೆ ವ್ಯಾಟ್ಸ್ಆ್ಯಪ್ ಪ್ರೊಫೈಲ್ ಪಿಕ್ಟರ್ ಸ್ಕ್ರೀನ್‌ಶಾಟ್ ತೆಗೆಯಲು ಸಾಧ್ಯವಿಲ್ಲ.

ವ್ಯಾಟ್ಸ್ಆ್ಯಪ್ ಡಿಪಿಯನ್ನು ಸ್ಕ್ರೀನ್‌ಶಾಟ್ ತೆಗೆಯುವ ಅವಕಾಶಕ್ಕೆ ವ್ಯಾಟ್ಸ್ಆ್ಯಪ್ ಬ್ರೇಕ್ ಹಾಕಿದೆ. ಒಂದು ವೇಳೆ ಸ್ಕ್ರೀನ್‌ಶಾಟ್ ತೆಗೆಯುವ ಪ್ರಯತ್ನ ಮಾಡಿದರೆ, ಪಿಕ್ ಬ್ಲಾಕ್ ಮಾಡಲಾಗಿದೆ ಅನ್ನೋ ನೋಟಿಫಿಕೇಶನ್ ಬರಲಿದೆ.

ಇಷ್ಟು ದಿನ ವ್ಯಾಟ್ಸ್ಆ್ಯಪ್ ಪ್ರೊಫೈಲ್ ಪಿಕ್ ಕ್ಲಿಕ್ ಮಾಡಿ, ಸ್ಕ್ರೀನ್‌ಶಾಟ್ ತೆಗೆದು ಇತರರಿಗೆ ಕಳುಹಿಸಲು ಸಾಧ್ಯವಾಗುತ್ತಿತ್ತು. ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತಿತ್ತು.

ಈ ಕುರಿತು ಹಲವು ದೂರುಗಳು ದಾಖಲಾಗಿತ್ತು. ಪ್ರೊಫೈಲ್ ಪಿಕ್ ದುರ್ಬಳಕೆ ಕುರಿತು ಹಲವು ದೂರುಗಳು ದಾಖಲಾಗಿತ್ತು. ಹೀಗಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಪರಿಚಯಿಸುತ್ತಿದೆ.

ಸದ್ಯ ಹೊಸ ಫೀಚರ್ ವ್ಯಾಟ್ಸ್ಆ್ಯಪ್ ಬೀಟಾ ವರ್ಶನ್ ‌ನಲ್ಲಿ ಪರಿಚಯಿಸಲಾಗಿದೆ.ಶೀಘ್ರದಲ್ಲೇ ಎಲ್ಲಾ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಈ ಪ್ರೈವೈಸಿ ಫೀಚರ್ ಲಭ್ಯವಾಗಲಿದೆ.

Related Articles

Latest Articles