ಮಾನ್ಸೂನ್ ಪ್ರಾರಂಭವಾಗುವ ಮುನ್ನವೇ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಿವಿಧೆಡೆ ಸಿಡಿಲು ಬಡಿದು 12 ಜನ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಚಂದನ್ ಸಹಾನಿ ,ರಾಜ್ ಮೃದ್ದಾ ಮತ್ತು ಮನಜಿತ್ ಮಂಡಲ್ ಆಸಿಟ್ ಸಹಾ ಶಹಾಪುರ್ ಪ್ರದೇಶದಲ್ಲಿ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹರಿಶ್ಚಂದ್ರಪುರದ 8 ವರ್ಷದ ಬಾಲಕ ರಾಣಾ ಶೇಖ್, ನಯನ್ ರಾಯ್, ಪ್ರಿಯಾಂಕಾ ಸಿಂಘ ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ.
ಸದ್ಯ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರವನ್ನು ಜಿಲ್ಲಾಡಳಿತ ಘೋಷಿಸಿದೆ. ಇನ್ನು ಶವಗಾರದ ಬಳಿ ಮೃತರ ಕುಟುಂಬಸ್ಥರ ಆಂಕ್ರಂದನ ಮುಗಿಲು ಮುಟ್ಟಿದೆ.