Sunday, May 18, 2025

ಉಡುಪಿ: ಅಂತಿಂಥ ಹೆಣ್ಣು ನಾನಲ್ಲ..! ಮಕ್ಮಲ್ ಟೋಪಿ ಹಾಕಿ ಎಂಟು ಮದುವೆಯಾದ ಮಹಿಳೆ

ಉಡುಪಿ: ಪುರುಷರು ಹಲವು ಮಹಿಳೆಯರನ್ನು ಮದುವೆಯಾಗಿ ವಂಚಿಸುವ ಬಗ್ಗೆ ವರದಿ ಓದಿದ್ದೇವೆ. ಆದ್ರೆ ಇಲ್ಲೊಬ್ಬಳು ಬರೋಬ್ಬರಿ ಎಂಟಕ್ಕೂ ಅಧಿಕ ಮಂದಿ ಪುರಷರನ್ನು ವಂಚಿಸಿ ಮದುವೆಯಾಗಿದ್ದಾಳೆ ಎಂಬ ಆರೋಪವನ್ನು ಸ್ವತಃ ಮಾಜಿ ಗಂಡನೇ ಹೊರಿಸಿದ ಘಟನೆ ವರದಿಯಾಗಿದೆ.

ಉಡುಪಿ ನಿವಾಸಿಯಾಗಿರುವ ತಬಸುಮ ಹಲವು ಪುರುಷರನ್ನು ವಿವಾಹ ಆಗಿ ವಂಚನೆ ಮಾಡಿದ್ದಾಗಿ ಆರೋಪ ಕೇಳಿಬಂದಿದೆ. ಈ ಬಗ್ಗೆ ಕನ್ನಡ ಸುದ್ದಿ ವಾಹಿನಿ ನ್ಯೂಸ್ ಫಸ್ಟ್‌ ವಿಸ್ಕೃತ ವರದಿ ಪ್ರಕಟಿಸಿದೆ.

ತಬಸುಮಾ 2004ರಲ್ಲಿ ಶಿವಮೊಗ್ಗ ಜಿಲ್ಲೆಯ ಮಹ್ಮದ್ ಹುಸೇನರ್​ನ್ನ ವಿವಾಹವಾಗಿದ್ದಾಳೆ. 12 ವರ್ಷದ ಬಳಿಕ ಮೊದಲ ಗಂಡನಿಂದ ದೂರವಾಗಿ ಆ ನಂತರ ಒಬ್ಬೊಬ್ಬರನ್ನೇ ವಿವಾಹ ಆಗಿದ್ದಾಳೆ.

ಉಡುಪಿ, ಶಿವಮೊಗ್ಗ, ಬೆಂಗಳೂರು, ಹೊಸಪೇಟೆ, ತುಮಕೂರು, ಹಾವೇರಿ, ಕೋಲಾರ ಹೀಗೆ ವಿವಿಧೆಡೆಗಳಲ್ಲಿ ಎಂಟಕ್ಕೂ ಅಧಿಕ ವಿವಾಹ ಆಗಿದ್ದಾಳೆ ಎಂದು ಹೊಸಪೇಟೆ ಮೂಲದ ವ್ಯಕ್ತಿ, ಮಾಜಿ ಪತಿ ದಾಖಲೆ ಸಮೇತ ರಿವೀಲ್ ಮಾಡಿದ್ದಾನೆ.

ನ್ಯೂಸ್‌ಫಸ್ಟ್‌ನ ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈಗ ತಬಸುಮಾಳ ಮುಖವಾಡ ಕಳಚಿಬಿದ್ದಿದ್ದು, ಮದುವೆ ಅನ್ನೋದನ್ನ ಬ್ಯುಸಿನೆಸ್ ಮಾಡ್ಕೊಂಡಿದ್ಳು ಅನ್ನೋ ಸ್ಫೋಟಕ ವಿಚಾರ ಬಯಲಾಗಿದೆ. ಮದುವೆಯಾಗಿದ್ದ ಪುರುಷರನ್ನೇ ಟಾರ್ಗೆಟ್ ಮಾಡಿ ಅವರಿಗೆ ಮಕ್ಮಲ್ ಟೋಪಿ ಹಾಕೋದೇ ಇವಳ ಕೆಲಸ ಆಗಿತ್ತು ಎಂದಿದ್ದಾನೆ.

Related Articles

Latest Articles