ವಯನಾಡ್: ಮಾನಂತವಾಡಿಯ ಲಾಡ್ಜ್ ಒಂದರಲ್ಲಿ ನೌಕರನ ಮೇಲೆ ಯುವಕರ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ಲಾಡ್ಜ್‌ನಲ್ಲಿ ಕೊಠಡಿಗೆ ಮುಂಗಡ ಹಣ ಕೇಳಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪು ಹಲ್ಲೆ ನಡೆಸಿದೆ ಎಂದು ಮಲಯಾಳಂ ಸುದ್ದಿ ವಾಹಿನಿ ಜನಮ್ ಆನ್‌ಲೈನ್ ವರದಿ ಮಾಡಿದೆ. ಸನ್ನಿಧಿ ಲಾಡ್ಜ್ ಉದ್ಯೋಗಿ ರಾಜನ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಮೂಗಿಗೆ ತೀವ್ರ ಗಾಯವಾಗಿದೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸೆಪ್ಟೆಂಬರ್ 27ರಂದಿ ಸುಮಾರು 3 ಗಂಟೆಗೆ ಸಂಭವಿಸಿದೆ. ಯುವಕರ ಗುಂಪೊಂದು ಮೋಟಾರು ಸೈಕಲ್‌ಗಳಲ್ಲಿ ಆಗಮಿಸಿ ಲಾಡ್ಜ್‌ನಲ್ಲಿ ಕೊಠಡಿಯನ್ನು ಕೇಳಿದ್ದಾರೆ. ರಾಜನ್ ಲಾಡ್ಜ್‌ನಲ್ಲಿ ಕೊಠಡಿಗೆ ಮುಂಗಡ ಹಣ ಕೇಳಿದಾಗ ಹಲ್ಲೆ ನಡೆದಿದೆ.
ನಂತರ, ಯುವಕರು ಒಂದು ಗಂಟೆಗೂ ಹೆಚ್ಚು ಕಾಲ ಲಾಡ್ಜ್‌ನಲ್ಲಿ ರಂಪಾಟ ನಡೆಸಿದ್ದಾರೆ.
‘ಕೆಎಲ್ 58 ಎಇ 0427’ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್‌ನಲ್ಲಿ ಬಂದ ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಾಯಗೊಂಡ ರಾಜನ್ ಆರೋಪಿಸಿದ್ದಾರೆ. ಬೈಕ್ ನಂಬರ್ ನೀಡಿದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಅವರು ದೂರಿದ್ದಾರೆ.