Saturday, January 25, 2025

ಬಂಟ್ವಾಳ: ಅಡಿಕೆ, ಕರಿಮೆಣಸು ಕಳವು; ದೂರು ದಾಖಲು

ಬಂಟ್ವಾಳ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿನ ಮನೆಯ ಸಮೀಪದ ಕೊಠಡಿಯಲ್ಲಿಟ್ಟಿದ್ದ ಅಡಿಕೆ ಮತ್ತು ಕರಿಮೆಣಸು ಕಳವಾಗಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.

ಕುಡ್ತಮುಗೇರು ಕೆ. ಅಣ್ಣು ಸಪಲ್ಯ (62) ಅವರು ಒಣಗಿಸಿ ಸುಲಿಯದ ಅಡಿಕೆ (ಅಂದಾಜು 150 ಕೆ.ಜಿ.) ಮತ್ತು 4 ಗೋಣಿಚೀಲದಲ್ಲಿ ಒಣಗಿದ ಕರಿಮೆಣಸು (ಅಂದಾಜು 30 ಕೆ.ಜಿ.)ಗಳನ್ನು ದಾಸ್ತಾನಿರಿಸಿದ್ದರು.

ಕೊಠಡಿಯ ಬಾಗಿಲಿನ ಚಿಲಕವನ್ನು ಮುರಿದಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ, ಅಡಿಕೆ ಮತ್ತು ಕಾಳುಮೆಣಸು ಕಳ್ಳತನ ಆಗಿರುವುದು ತಿಳಿಯಿತು. ಕಳ್ಳತನವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 57,000 ರೂ. ಆಗಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles